Home News Kash Patel: ಅಮೆರಿಕದ FBI ನಿರ್ದೇಶಕರಾಗಿ ನೇಮಕ

Kash Patel: ಅಮೆರಿಕದ FBI ನಿರ್ದೇಶಕರಾಗಿ ನೇಮಕ

Kash Patel


Washington: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರ ಆಪ್ತ ಸಹಾಯಕರಾದ ಮತ್ತು ಭಾರತ ಮೂಲದ ಕಾಶ್ ಪಟೇಲ್ (Kash Patel-Kashyap Patel) ಅವರನ್ನು FBI (Federal Bureau of Investigation) ನಿರ್ದೇಶಕರಾಗಿ ನೇಮಿಸಲಾಗಿದೆ. ಇದನ್ನು ಅಮೆರಿಕದ ಅತ್ಯುನ್ನತ ತನಿಖಾ ಸಂಸ್ಥೆಯಲ್ಲಿನ ಮಹತ್ವದ ಬದಲಾವಣೆ ಎಂದು ಪರಿಗಣಿಸಲಾಗಿದೆ.

ಟ್ರಂಪ್ ಅವರ ನಿಕಟ ಬೆಂಬಲಿಗರಾದ ಕಾಶ್ ಪಟೇಲ್ ಅವರ ನೇಮಕವನ್ನು ಅಮೆರಿಕ ಸೆನೆಟ್ 51-49 ಮತಗಳಿಂದ ಅನುಮೋದಿಸಿದೆ. ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಸಂತಸ ಹಂಚಿಕೊಂಡ ಅವರು, “FBI ನ 9ನೇ ನಿರ್ದೇಶಕರಾಗಿರುವುದು ಗೌರವದ ವಿಷಯ. ನನ್ನ ಮೇಲಿಟ್ಟ ನಂಬಿಕೆಗೆ ಧನ್ಯವಾದಗಳು. ಪಾರದರ್ಶಕತೆ, ಜವಾಬ್ದಾರಿತನ ಮತ್ತು ನ್ಯಾಯಸಮ್ಮತ FBI Americaದ ಜನತೆಗೆ ಅಗತ್ಯ,” ಎಂದು ತಿಳಿಸಿದ್ದಾರೆ.

ಕಾಶ್ ಪಟೇಲ್ ನೇಮಕದ ನಂತರ FBIಯಲ್ಲಿ ಪ್ರಮುಖ ಬದಲಾವಣೆಗಳು ಆಗಲಿವೆ. ಅವರು ವಾಷಿಂಗ್ಟನ್ ಪ್ರಧಾನ ಕಚೇರಿಯ ಸಿಬ್ಬಂದಿ ಕಡಿತ ಮಾಡುವುದರ ಜೊತೆಗೆ, ರಾಷ್ಟ್ರೀಯ ಭದ್ರತೆಯಿಗಿಂತ ಅಪರಾಧ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಲಿದ್ದಾರೆ ಎಂದು ಭಾವಿಸಲಾಗಿದೆ.

ಕಾಶ್ ಪಟೇಲ್ ಭಾರತ ಮೂಲದ ಅಮೇರಿಕನ್ ಪ್ರಜೆ. ಅವರು ನ್ಯೂಯಾರ್ಕ್ ರಾಜ್ಯದ ಹ್ಯಾಗರ್ಡನ್ ನಗರ ನಿವಾಸಿ. ಅವರ ಪೋಷಕರು ಗುಜರಾತ್ ಮೂಲದವರು ಹಾಗೂ 1970ರ ದಶಕದಲ್ಲಿ ವಿದೇಶಕ್ಕೆ ಸ್ಥಳಾಂತರಗೊಂಡಿದ್ದರು.

ಮೊದಲು ಉಗಾಂಡಾದಲ್ಲಿ ವಾಸವಿದ್ದ ಅವರ ಕುಟುಂಬ, ಜನಾಂಗೀಯ ತಾರತಮ್ಯದ ಕಾರಣ ಕೆನಡಾದಲ್ಲಿ ನೆಲೆಸಿತು. ಬಳಿಕ, ಅಮೆರಿಕಕ್ಕೆ ವಲಸೆ ಹೋದರು.

ಪಟೇಲ್, ರಿಚ್ಮಂಡ್ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಕ್ರಿಮಿನಲ್ ಜಸ್ಟೀಸ್ ಅಧ್ಯಯನ ಮಾಡಿದರು. ಟ್ರಂಪ್ ಅವರ ಮೊದಲ ಆಡಳಿತಾವಧಿಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದರು. ಐಸಿಸ್, ಅಲ್-ಖೈದಾ ನಾಯಕ ಅಲ್-ಬಾಗ್ದಾದಿ ಮತ್ತು ಖಾಸಿಮ್ ಅಲ್-ರಿಮಿ ಮುಂತಾದವರ ವಿರುದ್ಧ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

Kash Patel ಕಾರ್ಯನಿರ್ವಹಿಸಿದ್ದ ಮುಖ್ಯ ಹುದ್ದೆಗಳು

  • ಅಮೆರಿಕದ ಒತ್ತೆಯಾಳುಗಳನ್ನು ಮರಳಿ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದರು.
  • ಗುಪ್ತಚರ ಕುರಿತ ಸದನದ ಶಾಶ್ವತ ಆಯ್ಕೆ ಸಮಿತಿಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಸೀನಿಯರ್ ಅಡ್ವೈಸರ್ ಆಗಿ ಸೇವೆ ಸಲ್ಲಿಸಿದರು.
  • ರಾಜ್ಯ ಮತ್ತು ಫೆಡರಲ್ ನ್ಯಾಯಾಲಯಗಳಲ್ಲಿ ಕಾನೂನು ತಜ್ಞನಾಗಿ ಹಲವಾರು ಗಂಭೀರ ಪ್ರಕರಣಗಳಲ್ಲಿ ವಕೀಲರಾಗಿದ್ದರು.

ಕಾಶ್ ಪಟೇಲ್ ಟ್ರಂಪ್ ಅವರ ಆಪ್ತ ಸಹಾಯಕ ಮತ್ತು ಭಕ್ತರಾದವರು. ಟ್ರಂಪ್ ಅವರ ಪರ ಕಾರ್ಯನಿರ್ವಹಿಸುವ ಅವರ ಸಮರ್ಪಣೆಯಿಂದ ಅವರು ರಾಷ್ಟ್ರಪತಿ ಅವರ ವಿಶ್ವಾಸಾರ್ಹ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version