ಒಡಿಶಾದ ಮಯೂರ್‌ಭಂಜ್ (Odisha Mayurbhanj) ಜಿಲ್ಲೆಯ ಹೃದಯಭಾಗದಲ್ಲಿ, ವಿಶೇಷವಾದ ಪಾಕಶಾಲೆಯ ಸಂಪ್ರದಾಯವೊಂದು ಯುಗಗಳಿಂದಲೂ ನಡೆದುಕೊಂಡು ಬಂದಿದೆ. ಸ್ಥಳೀಯವಾಗಿ ‘ಕಾಯ್ ಚಟ್ನಿ’ (Kai Chutney) ಎಂದು ಕರೆಯಲ್ಪಡುವ ಈ ವಿಶೇಷ ತಿನಿಸು ಕೆಂಪು ನೇಕಾರ ಇರುವೆಗಳನ್ನು ಬಳಸಿ ತಯಾರಿಸಲಾಗುತ್ತದೆ. ತಮ್ಮ ಕಡಿತಕ್ಕೆ ಹೆಸರುವಾಸಿಯಾಗಿರುವ ಈ ಇರುವೆಗಳನ್ನು ವೈಜ್ಞಾನಿಕವಾಗಿ ಓಕೋಫಿಲ್ಲಾ ಸ್ಮಾರಾಗ್ಡಿನಾ ಎಂದು ಕರೆಯಲಾಗುತ್ತದೆ. ಈ ಇರುವೆಗಳು ಏಷ್ಯಾದ ಎರಡನೇ ಅತಿದೊಡ್ಡ ಜೀವಗೋಳವಾಗಿರುವ ಸುಪ್ರಸಿದ್ಧ ಸಿಮಿಲಿಪಾಲ್ ಕಾಡುಗಳನ್ನು ಒಳಗೊಂಡಂತೆ ಮಯೂರ್‌ಭಂಜ್‌ನ ಸೊಂಪಾದ ಕಾಡುಗಳಲ್ಲಿ ಕಾಣಸಿಗುತ್ತವೆ.
ಈ ಖಾದ್ಯಕ್ಕೆ ಮುಕುಟಗರಿ ಎನ್ನುವಂತೆ ಮಯೂರ್‌ಭಂಜ್‌ನ ಕೆಂಪು ಇರುವೆ ಚಟ್ನಿಗೆ (Red Ant Chutney) – ಭೌಗೋಳಿಕ ಸೂಚಕ (GI) ಟ್ಯಾಗ್ ಲಭಿಸಿದೆ. ಈ ಖಾದ್ಯವು ಎಷ್ಟು ವಿಶಿಷ್ಟ ಮತ್ತು ಪ್ರದೇಶಿಕ ಪ್ರಾಮುಖ್ಯತೆಯನ್ನು ಪಡೆದಿದೆ ಎಂದು ಈ ಟ್ಯಾಗ್ ಗುರುತಿಸುತ್ತದೆ.
ಕಾಯ್ ಚಟ್ನಿ ಯನ್ನು ಹೇಗೆ ತಯಾರಿಸಲಾಗುತ್ತದೆ?
ಮಯೂರ್‌ಭಂಜ್‌ನ ಸ್ಥಳೀಯ ಬುಡಕಟ್ಟು ಕುಟುಂಬಗಳು ತಲೆಮಾರುಗಳಿಂದ ಈ ಖಾದ್ಯವನ್ನು ತಯಾರಿಸುತ್ತಾರೆ. ಅವರು ಇರುವೆಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಾರೆ ಅಲ್ಲದೆ ಸ್ವಾದಿಷ್ಟವಾದ ಚಟ್ನಿಗಳನ್ನು ತಯಾರಿಸಲು ಸಹ ಬಳಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಇರುವೆಗಳು ಮತ್ತು ಅವುಗಳ ಮೊಟ್ಟೆಗಳನ್ನು ಎಚ್ಚರಿಕೆಯಿಂದ ಸಂಗ್ರಹಿಸಲಾಗುತ್ತದೆ, ಸ್ವಚ್ಛಗೊಳಿಸಲಾಗುತ್ತದೆ ಮತ್ತು ನಂತರ ಚಟ್ನಿಗೆ ಉಪ್ಪು, ಶುಂಠಿ, ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿಗಳ ಮಿಶ್ರಣವನ್ನು ಮುಖ್ಯ ಪದಾರ್ಥವದ ಇರುವೆಗಳನ್ನು ಬೆರೆಸಿ, ಪುಡಿಮಾಡಿ ವಿಶಿಷ್ಟ ‘ಕಾಯ್ ಚಟ್ನಿ’ ಯನ್ನು ತಯಾರು ಮಾಡಲಾಗುತ್ತದೆ.
ಈ ಕೆಂಪು ಇರುವೆ ಚಟ್ನಿ ಕೇವಲ ರುಚಿಕರವಷ್ಟೇ ಅಲ್ಲ; ಇದು ಆರೋಗ್ಯಕರವಾಗಿಯೂ ಹೆಸರುವಾಸಿಯಾಗಿದೆ. ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಸತು, ಪ್ರೋಟೀನ್ ಮತ್ತು ವಿಟಮಿನ್ ಬಿ -12 ನೊಂದಿಗೆ ತುಂಬಿರುವ ಈ ತಿನಿಸು ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಇದು ಬಲವಾದ ನರಮಂಡಲ ಮತ್ತು ಮೆದುಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಜನರು ನಂಬುತ್ತಾರೆ, ಬಹುಶಃ ಖಿನ್ನತೆ, ಬಳಲಿಕೆ ಮತ್ತು ಮರೆವಿನಂತ ಸಮಸ್ಯೆಗಳಿಗೆ ಇದು ಸಹಾಯ ಮಾಡುತ್ತದೆ.
ಪರಿಸರಕ್ಕೆ ಏಕೆ ಮುಖ್ಯ?
ಈ ಕೆಂಪು ನೇಕಾರ ಇರುವೆಗಳಂತಹ ಕೀಟಗಳು, ಜಾನುವಾರುಗಳಿಗೆ ಹೋಲಿಸಿದರೆ ಹೆಚ್ಚು ಪರಿಸರ ಸ್ನೇಹಿ ಪ್ರೋಟೀನ್ ಮೂಲವೆಂದು ಜಾಗತಿಕವಾಗಿ ನಂಬಲಾಗಿದೆ. ಇದು ಸುಸ್ಥಿರ ಆಹಾರ ವ್ಯವಸ್ಥೆಯನ್ನು ರಚಿಸಲು ಮತ್ತು ಹಸಿರುಮನೆ ಅನಿಲ (ಗ್ರೀನ್ ಹೌಸ್ ಎಫೆಕ್ಟ್) ಹೊರಸೂಸುವಿಕೆಯ ಬಗ್ಗೆ ಕಾಳಜಿಯನ್ನು ಪರಿಹರಿಸಲು ಒಂದು ಮಾರ್ಗವಾಗಿ ಕಂಡುಬರುತ್ತದೆ.
ಮಯೂರ್‌ಭಂಜ್‌ನಲ್ಲಿ ಮಾತ್ರವಲ್ಲ:
ಮಯೂರ್‌ಭಂಜ್ ತನ್ನ ಕೆಂಪು ಇರುವೆ ಚಟ್ನಿ ಬಗ್ಗೆ ಹೆಮ್ಮೆಪಡುತ್ತಿದ್ದರೆ, ಜಾರ್ಖಂಡ್ ಮತ್ತು ಛತ್ತೀಸ್‌ಗಢ ಸೇರಿದಂತೆ ಭಾರತದ ಇತರ ಪೂರ್ವ ರಾಜ್ಯಗಳಲ್ಲಿ ನೀವು ಇದೇ ರೀತಿಯ ಅಡುಗೆ ಸಂಪ್ರದಾಯಗಳನ್ನು ಕಾಣಬಹುದು. ಈ ರೀತಿಯ ವಿಶಿಷ್ಟ ಖಾದ್ಯಗಳ ವ್ಯಾಪಕ ಉಪಸ್ಥಿತಿಯು ಭಾರತೀಯ ಆಹಾರಶಾಸ್ತ್ರದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಶ್ರೀಮಂತಿಕೆಯನ್ನು ತೋರಿಸುತ್ತದೆ.
For Daily Updates WhatsApp ‘HI’ to 7406303366
The post ಮಯೂರ್‌ಭಂಜ್‌ನ ವಿಶಿಷ್ಟ ಕೆಂಪು ಇರುವೆ ಚಟ್ನಿಗೆ ಪ್ರತಿಷ್ಠಿತ GI ಟ್ಯಾಗ್ appeared first on WeGnana – Kannada Science and Technology News Updates.