Home Science Mobile Phone ಬಳಕೆಯು ಪುರುಷರ ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದೇ?

Mobile Phone ಬಳಕೆಯು ಪುರುಷರ ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದೇ?

ಮೊಬೈಲ್ ಫೋನ್ (Mobile Phone) ಬಳಕೆಯು ಪುರುಷರ ಫಲವತ್ತತೆಯ (Men’s Fertility) ಮೇಲೆ ಪರಿಣಾಮ ಬೀರಬಹುದೇ? ಹೊಸ ಅಧ್ಯಯನವು ಕೆಲವು ಆಶ್ಚರ್ಯಕರ ವಿಷಯಗಳನ್ನು ಹೊರಹಾಕಿದೆ.

ಮೊಬೈಲ್ ಫೋನ್ ಬಳಕೆ ಮತ್ತು ಪುರುಷರಲ್ಲಿ ವೀರ್ಯಾಣುಗಳ (Sperm Count) ಸಂಖ್ಯೆಯಲ್ಲಿನ ಇಳಿಕೆಯ ನಡುವಿನ ಸಂಬಂಧವನ್ನು ಈ ಅಧ್ಯಯನ ಬಹಿರಂಗ ಪಡಿಸಿದ್ದು, ಕಳೆದ ಐದು ದಶಕಗಳಲ್ಲಿ, ವಿಶ್ವಾದ್ಯಂತ ವೀರ್ಯಾಣುಗಳ ಸಂಖ್ಯೆಯಲ್ಲಿ ಗಮನಾರ್ಹ 50% ಕ್ಕಿಂತ ಹೆಚ್ಚು ಕುಸಿತ ಕಂಡುಬಂದಿದ್ದು, ಇದರ ಹಿಂದಿನ ಕಾರಣಗಳನ್ನು ಈ ಅಧ್ಯಯನವು ಪರಿಶೀಲಿಸಿದೆ.

18 ರಿಂದ 22 ವರ್ಷ ವಯಸ್ಸಿನ ಯುವಕರ ಮೇಲೆ ಈ ಸಂಶೋಧನೆ ನಡೆಸಿದ್ದು ದಿನಕ್ಕೆ 20 ಕ್ಕಿಂತ ಹೆಚ್ಚು ಬಾರಿ ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸುವವರ ಒಟ್ಟಾರೆ ವೀರ್ಯಾಣು ಸಂಖ್ಯೆಯಲ್ಲಿ ಶೇ. 21% ರಷ್ಟು ಕಡಿಮೆ ಆಗುವ ಸಂಭವವಿರುತ್ತದೆ ಎಂದು ಸಂಶೋಧನೆ ತಿಳಿಸುತ್ತದೆ. ಮೊಬೈಲ್ ಅನ್ನು ಹೇಗೆ ಬಳಸಿದರೆ ಇದಕ್ಕೆ ಕಾರಣವೆಂದು ಅಧ್ಯನ ಸ್ಪಷ್ಟವಾಗಿ ತಿಳಿಸಿಲ್ಲ.

ಕಳೆದ ೧೩ ವರ್ಷಗಳಲ್ಲಿ ಇದರ ಪರಿಣಾಮ ಕಡಿಮೆಯಾಗಿದ್ದು ಬದಲಾದ ತಾಂತ್ರಿಕತೆಯೇ ಇದಕ್ಕೆ ಕಾರಣವರಿಬಹುದೆಂದು ಅಂದಾಜಿಸಲಾಗಿದೆ. ಈ ಸಂಶೋಧನೆಯು ವೀರ್ಯಾಣುಗಳ ಸಂಖ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರೂ, ವೀರ್ಯದ ಆಕಾರ ಮತ್ತು ಚಲನೆಯಲ್ಲಿ ಯಾವುದೇ ಕುಸಿತ ಕಂಡುಬಂದಿಲ್ಲ. ವೀರ್ಯದ ಆರೋಗ್ಯ, ಡಿಎನ್‌ಎ ಸಮಗ್ರತೆ ಮತ್ತು ರೂಪವಿಜ್ಞಾನದಂತಹ ಅಂಶಗಳು ಫಲವತ್ತತೆಗೆ ಸಮಾನವಾಗಿ ಮುಖ್ಯವೆಂದು ತಜ್ಞರು ಹೇಳುತ್ತಾರೆ.

ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಂಡರೆ ವೀರ್ಯಾಣುಗಳ ಆರೋಗ್ಯ ಚೆನ್ನಾಗಿರುತ್ತದೆ ಎಂದು ವೈದ್ಯರು ತಿಳಿಸುತ್ತಾರೆ. ನಿತ್ಯ ವ್ಯಾಯಾಮ, ಆರೋಗ್ಯಕರ ಊಟ, ಧೂಮಪಾನ ನಿಲ್ಲಿಸುವುದು, ಮಿತ ಮದ್ಯಪಾನ, ಮಾಡುವುದರಿಂದ ಒಳಿತು ಎಂದು ವೈದ್ಯರು ಹೇಳಿದ್ದಾರೆ.

For Daily Updates WhatsApp ‘HI’ to 7406303366

The post Mobile Phone ಬಳಕೆಯು ಪುರುಷರ ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದೇ? appeared first on WeGnana – Kannada Science and Technology News Updates.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version