Mulabagal, Kolar : ಮುಳಬಾಗಿಲು ನಗರದ ಹರಿದಾಸ ಪೀಠದಲ್ಲಿ ಮಂಗಳವಾರ ಪುರಂದರದಾಸರ ಮುಖ್ಯ ಆರಾಧನೆಯ (Purandaradasa Aradhana Mahotsava) ಅಂಗವಾಗಿ ಶ್ರೀಪುರಂದರ ವಿಠಲಸ್ವಾಮಿಗೆ ಸಾಲಂಕೃತ ಅಲಂಕಾರ ಮಾಡಲಾಗಿತ್ತು.
ವಿದ್ವಾನ್ ಮಧುಶೂಧನ್ ನೇತೃತ್ವದಲ್ಲಿ ನಡೆದ ಶ್ರೀಪುರಂದರದಾಸರ ನವರತ್ನಮಾಲಿಕೆ ಗೋಷ್ಠಿಗಾಯನ ಕಾರ್ಯಕ್ರಮದಲ್ಲಿ ವಿದ್ವಾನ್ ನಾಗವಲ್ಲಿ ಪುಸ್ತಕಂರಮಾ, ಡಾ.ರಂಜನಿ, ಶಶಿಕಲಾ ರಾಮು, ನಟರಾಜ್ ಕೆಜಿಎಫ್ ರಾಮಮೂರ್ತಿ, ಎಸ್.ರಾಮಮೂರ್ತಿ, ಧ್ರುವ, ನಟರಾಜ್, ಸುಬ್ರಮಣ್ಯ, ಶ್ರೀಧರ್, ಪ್ರವೀಣ್, ನಾಗರಾಜ್ ಪಾಲ್ಗೊಂಡಿದ್ದರು.
ವಿದ್ವಾನ್ ಮುರಳಿಧರ ವಿನಯ್‌ಶರ್ಮ, ಪಿ.ರಮಾ, ವಿದುಷಿ ಆರ್.ಚಂದ್ರಿಕಾ, ಡಾ. ವಿ.ನಾಗವಲ್ಲಿ ನಾಗರಾಜ್, ವಿ.ಅರ್ಚನ ಮತ್ತು ಶಿಷ್ಯವೃಂದ, ಅಶ್ವಿನಿ ಸತೀಶ್ ಮತ್ತು ಶಿಷ್ಯವೃಂದ, ಶಿಲ್ಪಶಶಿಧರ್, ಅಂಜನಾ ಪಿ.ರಾವ್, ಕೆ.ಲಾವಣ್ಯ, ಎಸ್.ಎ.ಸುಕೃತ, ಗುರುಕೃಪ ಸಂಗೀತ ಕುಟೀರ ಮೈಸೂರು ಇವರಿಂದ ದಾಸಕೃತಿ ಗಾಯನ ನಡೆಯಿತು. ಸಮನ್ವಯ ಕಲಾಕೇಂದ್ರದ ತಿರುಮಲೆ ಶ್ರೀನಿವಾಸ್, ಎನ್.ರಾಜರಾವ್ ಭಾಗವಹಿಸಿದ್ದರು.
ರಾಜ್ಯದ ಪ್ರಸಿದ್ಧ ಸಂಗೀತ ಕಲಾವಿದರ ಜೊತೆಗೆ ಸ್ಥಳೀಯ ಕಲಾವಿದರಿಗೆ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.