Chikkanayakanahalli, Tumkur (Tumakuru) : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕದ ಪದಾಧಿಕಾರಿಗಳು ಚಿಕ್ಕನಾಯಕನಹಳ್ಳಿ ತಾಲ್ಲೂಕು ತಹಶೀಲ್ದಾರ್ ಬಿ.ತೇಜಸ್ವಿನಿ (Tahsildar B. Tejasvini) ಅವರ ಮೇಲೆ FIR ದಾಖಲಾಗಿರುವುದನ್ನು ಹಿಂಪಡೆಯುವಂತೆ ತಹಶಿಲ್ದಾರ್ ಕಾರ್ಯಾಲಯದ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ಪೂರ್ವ ನಿಯೋಜಿತವಾಗಿ ತಹಶೀಲ್ದಾರ್ ಅವರ ವಿರುಧ್ದ ಪ್ರಕರಣ ದಾಖಲು ಮಾಡಲಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ದುರುದ್ದೇಶ ದಿಂದ ಇಂತಹ ಘಟನೆ ಸೃಷ್ಟಿ ಮಾಡಿ ತಾಲೂಕಿನಲ್ಲಿ ಅಶಾಂತಿ ನೆಲೆಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಸ್ಥಿತಿ ಆಗಾಗ ಮರುಕಳಿಸು ತ್ತಲೇ ಇದ್ದು ಸರ್ಕಾರಿ ನೌಕರರು ನ್ಯಾಯ ಯುತವಾಗಿ ಕೆಲಸ ನಿರ್ವಹಿಸುವುದು ಕಷ್ಟ ವಾಗುತ್ತದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಆರ್.ಪರಶಿವಮೂರ್ತಿ ತಿಳಿಸಿದರು.
ನೌಕರರ ಸಂಘದ ಪದಾಧಿಕಾರಿಗಳಾದ ಸಿ.ಗವಿರಂಗಯ್ಯ, ಕೃಷಿ ಇಲಾಖೆ ಹನುಮಂತರಾಜು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು .