Mulbagal, Kolar : ಶಿವರಾತ್ರಿಯ (Mahashivaratri) ಮರುದಿನ ಬುಧವಾರ ಮುಳಬಾಗಿಲು ತಾಲ್ಲೂಕಿನ ಆವಣಿ (Avani) ಗ್ರಾಮದ (Sri Ramalingeswara Swamy Temple) ಕಾಮಾಕ್ಷಿ ಸಮೇತ ರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವ (Kamakshi-Ramalingeswara Swamy Rathotsava) ಅಪಾರ ಜನಸ್ತೋಮದ ನಡುವೆ ವಿಜೃಂಭಣೆಯಿಂದ ನಡೆಯಿತು. ರಥ ಎಳೆಯುವುದಕ್ಕೂ ಮುಂಚೆ ಪಕ್ಕದ ಕೀಲುಹೊಳಲಿ ಗ್ರಾಮದ ದೇವತೆ ಸಲ್ಲಾಪುರಮ್ಮನಿಗೆ ಪೂಜೆ ಸಲ್ಲಿಸಿ ತಹಶೀಲ್ದಾರ್ ಶೋಭಿತಾ ರಥಕ್ಕೆ ಚಾಲನೆ ನೀಡಿದರು.
ಈ ಬಾರಿಯ ಜಾನುವಾರು ಜಾತ್ರೆಗೆ ತಾಲ್ಲೂಕಿನ ಸುತ್ತಮುತ್ತಲೂ ಅಲ್ಲದೇ ನೆರೆಯ ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಂದಲೂ ಮಾರಾಟಕ್ಕಾಗಿ ಜಾನುವಾರುಗಳನ್ನು ತರಲಾಗುತ್ತದೆ. ಎತ್ತುಗಳನ್ನು ಕೊಂಡುಕೊಂಡು ಜಾತ್ರೆಯಲ್ಲಿ ಮರುಮಾರಾಟ ಮಾಡುವ ಪ್ರಕ್ರಿಯೆಗಳು ಜೋರಾಗಿ ನಡೆಯಿತು.
ಶಾಸಕ ಎಚ್.ನಾಗೇಶ್, ಸಂಸದ ಎಸ್.ಮುನಿಸ್ವಾಮಿ, ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್, ಡಿವೈಎಸ್ಪಿ ಕೆ.ಸಿ. ಗಿರಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಡಾ.ಸರ್ವೇಶ್, ಗ್ರಾ.ಪಂ ಅಧ್ಯಕ್ಷ ಎಸ್. ಶ್ರೀರಾಮಪ್ಪ, ಜಿ.ಪಂ ಮಾಜಿ ಸದಸ್ಯ ಆರ್.ಕೃಷ್ಣಪ್ಪ, ಉಪ ತಹಶೀಲ್ದಾರ್ ನಾರಾಯಣಸ್ವಾಮಿ, ಕಂದಾಯ ನಿರೀಕ್ಷಕ ಸಿ.ಸುಬ್ರಮಣ್ಯಂ, ಪಿಡಿಒ ವರದರಾಜ್, ಮುಜರಾಯಿ ಅಧಿಕಾರಿ ಸಿ.ಲುವಸ್ವಾಮಿ ರಥೋತ್ಸವದಲ್ಲಿ ಭಾಗವಹಿಸಿದ್ದರು.