Friday, September 30, 2022
HomeKarnatakaMysuruಹಸುಗಳ ಕಳ್ಳತನ ಪ್ರಕರಣ ಭೇದಿಸಿದ Police

ಹಸುಗಳ ಕಳ್ಳತನ ಪ್ರಕರಣ ಭೇದಿಸಿದ Police

Mysuru : ರೈತರು ಕೊಟ್ಟಿಗೆಗಳಲ್ಲಿ ಕಟ್ಟಿರುತ್ತಿದ್ದ ದನಗಳನ್ನು ರಾತ್ರಿ ವೇಳೆ ಕಳ್ಳತನ ಮಾಡಿ ಸಂತೆಯಲ್ಲಿ ಮಾರುತ್ತಿದ್ದ 6 ಮಂದಿ ಆರೋಪಿಗಳನ್ನು ಬಂಧಿಸಿರುವ Mysore ಜಿಲ್ಲಾ Police ಪ್ರಕರಣವನ್ನು ಭೇದಿಸುವಲ್ಲಿ ಯಶಶ್ವಿಯಾಗಿದ್ದಾರೆ. ನಂಜನಗೂಡು ಗ್ರಾಮಾಂತರ ಠಾಣೆಯ (Nanjangud Rural Police Station) ಐದು, ಹುಣಸೂರಿನ (Hunsur) 5 ಪ್ರಕರಣಗಳಲ್ಲಿ 10 ದನ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಯನ್ನು ಮಾಡುತ್ತಿದ್ದಾರೆ.

Mysore Mysuru Nanjangud Cow Theft Case Police

ಕೊಟ್ಟಿಗೆಗಳಲ್ಲಿ ಕಟ್ಟಿರುವ ಹಸುಗಳು ರಾತ್ರಿ ವೇಳೆ ಕಳ್ಳತನವಾಗುತ್ತಿರುವ ಬಗ್ಗೆ ಜನವರಿ 7 ರಂದು ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದ ರೈತರೊಬ್ಬರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿಗೆ ಸಂಬಂಧಿಸಿದಂತೆ ನಂಜನಗೂಡು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಗಸ್ತನ್ನು ಹೆಚ್ಚಿಸಲಾಗಿತ್ತು. ಜ.14 ರಂದು ನಂಜನಗೂಡು ಗ್ರಾಮಾಂತರ ಠಾಣೆಯ ಕೆ.ಎ.ಚಂದ್ರ ಹಾಗೂ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಹೆಗ್ಗಡಹಳ್ಳಿ ಕಡೆಯಿಂದ ನಂಜನಗೂಡು ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದ ಇಬ್ಬರನ್ನು ಅನುಮಾನಾಸ್ಪದವಾಗಿ ವಿಚಾರಣೆ ಮಾಡಿದಾಗ ಹಸುಗಳನ್ನು ಕಳ್ಳತನ ಮಾಡಿರುವುದನ್ನು ಬಾಯ್ಬಿಟ್ಟಿದ್ದಾರೆ ಎಂದು ಬುಧವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ (Superintendent of Police R. Chethan) ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

- Advertisment -

Most Popular

Karnataka

India

You cannot copy content of this page