Home Business Oilfield ತಿದ್ದುಪಡಿ ಕಾಯ್ದೆಗೆ Rajya Sabha ಅನುಮೋದನೆ

Oilfield ತಿದ್ದುಪಡಿ ಕಾಯ್ದೆಗೆ Rajya Sabha ಅನುಮೋದನೆ

Oil and Gas

New Delhi: ತೈಲ ಮತ್ತು ಅನಿಲ (Oil and Gas) ಅನ್ವೇಷಣಾ ಮತ್ತು ಉತ್ಪಾದನಾ ವಲಯಕ್ಕೆ ಅನುಕೂಲವಾಗುವ ನಿಯಮಗಳನ್ನು ಒಳಗೊಂಡಿರುವ ಆಯಿಲ್​ಫೀಲ್ಡ್ ತಿದ್ದುಪಡಿ ಕಾಯ್ದೆ ಶೀಘ್ರದಲ್ಲೇ ಜಾರಿಗೆ ಬರಲಿದೆ. ಈ ಕಾಯ್ದೆಗೆ ನಿನ್ನೆ ರಾಜ್ಯಸಭೆಯಿಂದ ಅನುಮೋದನೆ ದೊರಕಿದೆ. ಈ ಕಾಯ್ದೆಯು ವಿಶ್ವಾಸವನ್ನು ಹೆಚ್ಚಿಸಿ, 20ಕ್ಕೂ ಹೆಚ್ಚು ವರ್ಷಗಳಿಂದ ಭಾರತದಲ್ಲಿ ತೈಲ ಮತ್ತು ಅನಿಲದ ಅವಶ್ಯಕತೆಗೂ ಅನುಕೂಲವಾಗಲಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು, “ನಮಗೆ 20ಕ್ಕೂ ಹೆಚ್ಚು ವರ್ಷ ತೈಲ ಮತ್ತು ಅನಿಲ ವಲಯದ ಅಗತ್ಯವಿದೆ. ಹೀಗಾಗಿ, ಉದ್ಯಮ ಭಾಗಿದಾರರಿಗೆ ವಿಶ್ವಾಸ ಮೂಡಿಸಲು ಈ ಕಾಯ್ದೆಯ ಅಗತ್ಯವಿದೆ.”

ಈ ಕಾಯ್ದೆ, ದೊಡ್ಡ ಸಂಸ್ಥೆಗಳಿಗೆ ಮಾತ್ರ ಲಭ್ಯವಿದ್ದ ತೈಲ ಮತ್ತು ಅನಿಲ ಅನ್ವೇಷಣಾ ಕ್ಷೇತ್ರದಲ್ಲಿ ಸಣ್ಣ ಮತ್ತು ಹೊಸ ಕಂಪನಿಗಳಿಗೆ ಉತ್ತೇಜನ ನೀಡಲಿದೆ. ಹೂಡಿಕೆದಾರರು ಮತ್ತು ಹೊಸ ಉದ್ಯಮಗಳನ್ನು ಆಕರ್ಷಿಸಲು ಇದು ಅನುಕೂಲಕರವಾಗಲಿದೆ.

ತೈಲ ಮತ್ತು ಅನಿಲ ಅನ್ವೇಷಣಾ ಕ್ಷೇತ್ರದಲ್ಲಿ ಇನ್​ಫ್ರಾಸ್ಟ್ರಕ್ಚರ್ ಮತ್ತಿತರ ಸೌಲಭ್ಯಗಳ ನಿರ್ಮಾಣಕ್ಕೆ ಬಹಳ ವೆಚ್ಚವಾಗುತ್ತದೆ. ಒಎನ್​ಜಿಸಿ, ಇಂಡಿಯನ್ ಆಯಿಲ್, ಹೆಚ್​​ಪಿ, ಬಿಪಿ, ನಯಾರ ಎನರ್ಜಿ, ಕೇರ್ನ್ ಆಯಿಲ್, ಜಿಎಐಎಲ್ ಇತ್ಯಾದಿ ದೈತ್ಯ ಕಂಪನಿಗಳು ಇಲ್ಲಿ ಅಸ್ತಿತ್ವ ಹೊಂದಿವೆ.

ಸಣ್ಣ ಕಂಪನಿಗಳಿಗೆ ಇಲ್ಲಿ ನೆಲೆಯೂರಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಮೂಲಸೌಕರ್ಯಗಳನ್ನು ವಿವಿಧ ಕಂಪನಿಗಳು ಹಂಚಿಕೊಂಡು ಬಳಸಿಕೊಳ್ಳಲು ಸಾಧ್ಯವಾಗುವಂತೆ ನಿಯಮ ರೂಪಿಸಲು ಈ ಕಾಯ್ದೆ ಅನುವು ಮಾಡಿಕೊಡುತ್ತದೆ. ಇದರಿಂದ ಸಣ್ಣ ಕಂಪನಿಗಳು ಮತ್ತು ಹೊಸ ಕಂಪನಿಗಳು ಈ ಕ್ಷೇತ್ರದಲ್ಲಿ ನೆಲೆಯೂರಲು ಸಾಧ್ಯವಾಗಬಲ್ಲುದು.

ಈ ಕಾಯ್ದೆ ಮೂಲಸೌಕರ್ಯಗಳನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ, ಇದರಿಂದ ಸಣ್ಣ ಕಂಪನಿಗಳು ಇಲ್ಲಿ ಕಾರ್ಯನಿರ್ವಹಿಸಬಲ್ಲವು. ಹೂಡಿಕೆದಾರರ ಅನುಕೂಲಕ್ಕಾಗಿ, ಲೀಸ್​ನ ಅವಧಿಯಲ್ಲಿ ಬದಲಾವಣೆ ಮಾಡಲಾಗುವುದಿಲ್ಲ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version