ಆಗಸ್ಟ್ 20, 2025 ರಂದು ನಡೆಯಲಿರುವ “ಮೇಡ್ ಬೈ ಗೂಗಲ್” ಈವೆಂಟ್‌ನಲ್ಲಿ ಬಹು ನಿರೀಕ್ಷಿತ Pixel 10, Pixel 10 Pro ಜೊತೆಗೆ ಹೊಸ Pixel 10 Pro Fold ಫೋನ್ ಅನಾವರಣಗೊಳ್ಳಲಿದೆ. ಆದರೆ ಈ ಘೋಷಣೆಗೂ ಮುನ್ನವೇ ಇದರ ಪ್ರಮುಖ ಮಾಹಿತಿಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ.
ಫೋಲ್ಡಬಲ್ ಡಿಸ್ಪ್ಲೇ ವೈಶಿಷ್ಟ್ಯಗಳು: Pixel 10 Pro Fold ಫೋನ್‌ನ್ನು 8 ಇಂಚುಗಳ ಒಳಗಿನ ಫೋಲ್ಡಿಂಗ್ ಡಿಸ್ಪ್ಲೇ ಜೊತೆಗೆ ತರಲಾಗುತ್ತದೆ. ಈ ಡಿಸ್ಪ್ಲೇಗೆ QHD+ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಹಾಗೂ LTPO OLED ತಂತ್ರಜ್ಞಾನವಿದೆ. ಹೊರಗಿನ ಪರದೆಯ ಗಾತ್ರ ಈಗ 6.4 ಇಂಚು ಆಗಿದ್ದು, 3000 ನಿಟ್ ಹೊಳಪನ್ನು ನೀಡುತ್ತದೆ. ಎರಡೂ ಪರದೆಗಳಿಗೆ ಗೋರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಇದೆ. ಹೊಸ ಹಿಂಜ್ ವಿನ್ಯಾಸ ಫೋನ್‌ನ್ನು ಹೆಚ್ಚು ತೆಳ್ಳಗಾಗಿಸಲಿದೆ.
ಬ್ಯಾಟರಿ: ಈ ಫೋನ್‌ಗೋಸ್ಕರ ಗೂಗಲ್ ತನ್ನ ಹೊಸ Tensor G5 ಚಿಪ್‌ಸೆಟ್ ಬಳಕೆ ಮಾಡಲಿದೆ. ಭದ್ರತೆಗೆ Titan M2 ಚಿಪ್ ಸಾಥ್ ನೀಡಲಿದೆ. 16GB RAM, 1TB ಒಳಂಗಾ ಮೆಮೊರಿ ಹಾಗೂ Android 16 ಆಪರೇಟಿಂಗ್ ಸಿಸ್ಟಮ್ ಇದರಲ್ಲಿದೆ. ಬ್ಯಾಟರಿ ಸಾಮರ್ಥ್ಯ 5,015mAh ಆಗಿದ್ದು, 23W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವಿದೆ.
ಕ್ಯಾಮೆರಾ ವ್ಯವಸ್ಥೆ: ಮುಖ್ಯ ಕ್ಯಾಮೆರಾ 50MP Samsung GN8 ಸೆನ್ಸರ್ ಹೊಂದಿದ್ದು, OIS ಮತ್ತು HDR ರೆಕಾರ್ಡಿಂಗ್ ಬೆಂಬಲಿಸುತ್ತದೆ. ಉಲ್ಟ್ರಾ ವೈಡ್ ಮತ್ತು ಟೆಲಿಫೋಟೋ ಕ್ಯಾಮೆರಾಗೆ Samsung 3J1 ಸೆನ್ಸರ್ ಬಳಸಲಾಗಿದೆ. ಟೆಲಿಫೋಟೋ ಲೆನ್ಸ್ 5x ಆಪ್ಟಿಕಲ್ ಹಾಗೂ 20x ಡಿಜಿಟಲ್ ಝೂಮ್ ಬೆಂಬಲಿಸುತ್ತದೆ. ಸೆಲ್ಫಿಗೆ 10.5MP ಕ್ಯಾಮೆರಾ ಇದೆ, ಇದರೊಂದಿಗೆ ಫೇಸ್ ಅನ್ಲಾಕ್ ಫೀಚರ್ ಕೂಡ ಇದೆ.
ಸಂಪರ್ಕ ವೈಶಿಷ್ಟ್ಯಗಳು: 5G SA/NSA, Wi-Fi 7, Bluetooth 5.4 ಹಾಗೂ USB 3.2 Type-C ಪೋರ್ಟ್ ಈ ಫೋನ್‌ನಲ್ಲಿ ಇದೆ.
ಅಂದಾಜು ಬೆಲೆಗಳು
- 256GB: €1,899 (ಸుమಾರು ₹1,90,675)
- 512GB: €2,029 (ಸుమಾರು ₹2,03,715)
- 1TB: €2,289 (ಸుమಾರು ₹2,29,820)
ಆಗಸ್ಟ್ 20ರಂದು ಮುಂಗಡ ಬುಕ್ಕಿಂಗ್ ಪ್ರಾರಂಭವಾಗುವ ಸಾಧ್ಯತೆ ಇದೆ, ಶಿಪ್ಪಿಂಗ್ ಆಗಸ್ಟ್ 28ರಿಂದ ಆರಂಭವಾಗಬಹುದು.
Google ಹೊಸ Pixel 10 Pro Fold ಮೂಲಕ ತನ್ನ ಫೋಲ್ಡಬಲ್ ಫೋನ್ ಶ್ರೇಣಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸಜ್ಜಾಗಿದೆ. ಇದರಲ್ಲಿನ ತಾಂತ್ರಿಕ ಸುಧಾರಣೆಗಳು ಮತ್ತು ಅತ್ಯಾಧುನಿಕ ಫೀಚರ್‌ಗಳು ಈ ಫೋನ್‌ನ್ನು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಪ್ರಬಲ ಆಕರ್ಷಣೆಯಾಗಿಸಬಹುದು.