Home Sports Kabaddi Pro Kabaddi League – Day 6 ಆರನೇ ದಿನದ ಆಟಗಳು

Pro Kabaddi League – Day 6 ಆರನೇ ದಿನದ ಆಟಗಳು

206
U.P. Yoddha vs Jaipur Pink Panthers Pro Kabaddi League 2021

ಪ್ರೊ ಕಬಡ್ಡಿ 2021 – ಆವೃತ್ತಿ 8 ರ ( Pro Kabaddi League) ಆರನೇ ದಿನದ ಎರಡು ಪಂದ್ಯಗಳೂ ಸೋಮವಾರ ರೋಮಾಂಚನಕಾರಿಯಾಗಿ ನಡೆದವು. ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಯು ಮುಂಬಾ (U Mumba) ತಮಿಳ್ ತಲೈವಾಸ್ (Tamil Thalaivas) ವಿರುದ್ಧ ಕಣಕ್ಕೆ ಇಳಿದರೆ, ಎರಡನೆಯ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers) ಯು.ಪಿ. ಯೋದ್ಧಾ (U.P. Yoddha) ಅನ್ನು ಎದುರಿಸಿತು.

ಪಂದ್ಯ 1: U Mumba Vs Tamil Thalaivas

ದಿನದ ಮೊದಲ ಪಂದ್ಯದ ಮೊದಲರ್ಧದಲ್ಲಿ ತಮಿಳ್ ತಲೈವಾಸ್ (Tamil Thalaivas), ಯು ಮುಂಬಾ ವಿರುದ್ಧ ದೊಡ್ಡ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ಉತ್ತಮ ಪ್ರದರ್ಶನವನ್ನು ತೋರಿ ಯು ಮುಂಬಾ (U Mumba) ಅದ್ಭುತ ಪುನರಾಗಮನವನ್ನು ಮಾಡಿತು ಮತ್ತು ಕೊನೆಯ 20 ನಿಮಿಷಗಳಲ್ಲಿ 16 ಅಂಕಗಳನ್ನು ಗಳಿಸಿ ಪಂದ್ಯವನ್ನು ತಲೈವಾಸ್ ಜೊತೆ ಟೈ (30-30) ಮಾಡಿಕೊಂಡಿತು.

ಯು ಮುಂಬಾ ಪರ ವಿ ಅಜಿತ್ ಕುಮಾರ್ (V Ajith Kumar) ಸೂಪರ್ 10 ನೊಂದಿಗೆ 15 ರೇಡ್ ಪಾಯಿಂಟ್‌ಗಳನ್ನು ಗಳಿಸಿ ಅತ್ಯುತ್ತಮ ಪ್ರದರ್ಶನ ನೀಡಿದರು. ತಲೈವಾಸ್‌ನ ಪರ ಮಂಜೀತ್ (Manjeet) 8 ಪಾಯಿಂಟ್‌ಗಳನ್ನು ಪಡೆದರು.

ಪಂದ್ಯ 2: Jaipur Pink Panthers vs U.P. Yoddha

ದಿನದ ಎರಡನೆಯ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ (Jaipur Pink Panthers) ಪ್ರೊ ಕಬಡ್ಡಿ 2021 ರಲ್ಲಿ ತಮ್ಮ ಗೆಲುವಿನ ಓಟವನ್ನು ಮುಂದುವರೆಸಿ, ಯುಪಿ ಯೋದ್ಧ dha) ಪರ ಋತುವಿನ ತಮ್ಮ ಎರಡನೇ ಗೆಲುವನ್ನು ದಾಖಲಿಸಿದರು. ಪಿಂಕ್ ಪ್ಯಾಂಥರ್ಸ್ ನ ಅರ್ಜುನ್ ದೇಶ್ವಾಲ್ (Arjun Deshwal) ಅವರ ಸೂಪರ್ 10 ಯುಪಿ ಯೋದ್ಧವನ್ನು ಮೂರು ಪಾಯಿಂಟ್‌ಗಳ ಅಂತರದಿಂದ (29-32) ಸೋಲಿಸಲು ಸಹಾಕಾರಿಯಾಯಿತು.

ಯುಪಿ ಯೋದ್ಧ ಪರ ಸುರೇಂದರ್ ಗಿಲ್ (Surender Gill) ಸೂಪರ್ 10 ಗಳಿಸಿದರೂ ಪಿಂಕ್ ಪ್ಯಾಂಥರ್ಸ್ ವಿರುದ್ಧ ಸೋಲನ್ನು ಅನುಭವಿಸಬೇಕಾಯಿತು.

PKL 2021 Day – 6 Score Card

PKL 2021 ರ ಆರನೇ ದಿನದ ಪಂದ್ಯಗಳ ನಂತರ ತಂಡಗಳ ಬಲಾಬಲಗಳು ಈ ರೀತಿ ಇವೆ


Image: Pro Kabaddi

NO COMMENTS

LEAVE A REPLY

Please enter your comment!
Please enter your name here

You cannot copy content of this page