Pro Kabaddi 2021 – ಆವೃತ್ತಿ 8 ರ ಜನವರಿ 7 ರಂದು ಕಬಡ್ಡಿ ಪ್ರೇಕ್ಷಕರು ಮತ್ತೆರಡು ರೋಚಕ ಪಂದ್ಯಗಳಿಗೆ ಸಾಕ್ಷಿಯಾದರು. ದಿನದ ಮೊದಲ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ (Haryana Steelers), ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ (Bengal Warriors) ವಿರುದ್ಧ ಸೆಣಸಿತು. ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers), ಪುಣೇರಿ ಪಲ್ಟನ್ (Puneri Paltan) ವಿರುದ್ಧ ಕಣಕ್ಕೆ ಇಳಿಯಿತು.
ಪಂದ್ಯ 1: Bengal Warriors Vs Haryana Steelers

ದಿನದ ಮೊದಲ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ (Haryana Steelers) ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ (Bengal Warriors) ವಿರುದ್ಧ 41-37 ಅಂತರದಿಂದ ಜಯಗಳಿಸಿತು. ಹರ್ಯಾಣ ಸ್ಟೀಲರ್ಸ್ ಪರ ಮೀಟೂ (Meetu) Super 10, ವಿಕಾಶ್ ಕಂಡೋಲಾ (Vikash Kandola) 9 ಅಂಕಗಳನ್ನು ಗಳಿಸಿದರು.
ಬೆಂಗಾಲ್ ವಾರಿಯರ್ಸ್ ಪರ ನಾಯಕ ಮಣಿಂದರ್ ಸಿಂಗ್ (Maninder Singh) 14 ಅಂಕಗಳನ್ನು, ಮೊಹಮ್ಮದ್ ನಬಿಬಕ್ಷ್ (Mohammad Nabibakhsh) 9 ಅಂಕಗಳನ್ನು, ಸಚಿನ್ ವಿಟ್ಲ (Sachin Vittala) 5 ಅಂಕಗಳನ್ನು ಅಂಕಗಳನ್ನು ಗಳಿಸಿದರು.
ಪಂದ್ಯ 2: Jaipur Pink Panthers Vs Puneri Paltan

ದಿನದ ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers), ಪುಣೇರಿ ಪಲ್ಟನ್ (Puneri Paltan) ವಿರುದ್ಧ ಪಂದ್ಯವನ್ನು 26-31 ಅಂಕಗಳಿಂದ ಜಯಗಳಿಸಿತು.
ಜೈಪುರ ಪಿಂಕ್ ಪ್ಯಾಂಥರ್ಸ್ ಪರ ಅರ್ಜುನ್ ದೇಶ್ವಾಲ್ (Arjun Deshwal) ಸೂಪರ್ 10 , 11 ರೇಡ್ ಪಾಯಿಂಟ್‌ಗಳನ್ನು ಗಳಿಸಿದರು. ಸಂದೀಪ್ ಧುಲ್ (Sandeep Dhull) ಮತ್ತು ಸಾಹುಲ್ ಕುಮಾರ್ (Sahul Kumar) ತಲಾ ನಾಲ್ಕು ಅಂಕಗಳನ್ನು ಗಳಿಸಿದರು.
PKL 2021 – January 7, 2022 Score Card
PKL 2021 ರ January 7, 2022 ದಿನದ ಪಂದ್ಯಗಳ ನಂತರ ತಂಡಗಳ ಬಲಾಬಲಗಳು ಈ ರೀತಿ ಇವೆ

Image: Pro Kabaddi