Punjab : ಗುರು ರವಿದಾಸ್ ಜಯಂತಿ (Guru Ravidas Jayanti) ಯ ಹಿನ್ನೆಲೆಯಲ್ಲಿ February 14 ರಂದು ನಡೆಯಬೇಕಿದ್ದ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ( Punjab Legislative Assembly Election) ಮುಂದೂಡುವಂತೆ (Postpone) ವಿವಿಧ ರಾಜಕೀಯ ಪಕ್ಷಗಳು ಒತ್ತಾಯಿಸಿದ ಹಿನ್ನಲೆಯಲ್ಲಿ, ಕೇಂದ್ರ ಚುನಾವಣಾ ಆಯೋಗ (Election Commission of India) ಪಂಜಾಬ್ ಚುನಾವಣೆಯ ದಿನಾಂಕವನ್ನು ಫೆಬ್ರವರಿ 20 ಕ್ಕೆ ಮುಂದೂಡಿದೆ.
ಪಂಜಾಬ್ ಮುಖ್ಯಮಂತ್ರಿ (Punjab chief Minister) ಚರಂಜಿತ್ ಸಿಂಗ್ ಚನ್ನಿ (Charanjit Singh Channi) ಸೇರಿ ವಿವಿಧ ರಾಜಕೀಯ ಪಕ್ಷಗಳ ಬೇಡಿಕೆಗಳನ್ನು ಪರಿಗಣಿಸಿ ಸಭೆಯಲ್ಲಿ ಚರ್ಚಿಸಿದ ಚುನಾವಣಾ ಆಯೋಗವು, ಫೆಬ್ರವರಿ 16 ರಂದು ನಡೆಯಲಿರುವ ಗುರು ರವಿದಾಸ್ ಜಯಂತಿಯ ಹಿನ್ನೆಲೆಯಲ್ಲಿ ಚುನಾವಣೆಯನ್ನು ಆರು ದಿನಗಳ ವರೆಗೆ ಮುಂದೂಡಿ ಆದೇಶ ಹೊರಡಿಸಿದೆ.
ಅಮರಿಂದರ್ ಸಿಂಗ್ ಅವರ PLC, BJP, BSP ಮತ್ತು ಪಂಜಾಬ್ Congress ನಂತಹ ಇತರ ರಾಜಕೀಯ ಪಕ್ಷಗಳೂ ಸಹ ಮೊದಲನೇ ಹಂತದ ಮತದಾನವನ್ನು ಮುಂದೂಡುವಂತೆ ಮನವಿ ಮಾಡಿದ್ದವು.
ಗುರು ರವಿದಾಸ್ ಜಯಂತಿ ಆಚರಿಸಲು ಲಕ್ಷಾಂತರ ಭಕ್ತರು ಉತ್ತರ ಪ್ರದೇಶದ ವಾರಣಾಸಿಗೆ ಭೇಟಿ ನೀಡಿವುದರಿಂದ ಅವರು ಮತ ಚಲಾಯಿಸಲು ಸಾಧ್ಯವಿಲ್ಲ ಎಂದು ಪಕ್ಷಗಳು ಚುನಾವಣಾ ಆಯೋಗಕ್ಕೆ ತಿಳಿಸಿದ್ದವು.