Hassan : ಕಳೆದ 1 ತಿಂಗಳಿನಿಂದ ನಡೆದ ರಾಮನಾಥಪುರದ ಶ್ರೀ ಸುಬ್ರಹ್ಮಣ್ಯಸ್ವಾಮಿ (Ramanathapura Subramanyaswamy Rathotsava) ಮಹಾ ರಥೋತ್ಸವ ಹಾಗೂ ತುಳು ಷಷ್ಠಿ ಬೆಳ್ಳಿರಥೋತ್ಸವದ ನಂತರ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿಯ ದೇವಾಲಯದ ಒಳ ಪ್ರಾಂಗಣದಲ್ಲಿರುವ ಶಕ್ತಿದೇವತೆ ಹೊಸಳಿಗಮ್ಮನವರಿಗೆ ರಥೋತ್ಸವ (Hosaligamma Rathotsava), ವಿಶ್ವಶಾಂತಿಗಾಗಿ 6 ಸಾವಿರ ತೆಂಗಿನಕಾಯಿ ಈಡುಗಾಯಿ ಸೇವೆಯೊಂದಿಗೆ ಪೂಜೆ ಸಲ್ಲಿಸಲಾಯಿತು ಎಂದು ದೇವಸ್ಥಾನದ ಅಗಮನ ಶಾಸ್ತ್ರ ಪಂಡಿತ ಭಾರತೀರಮಣ ಆಚಾರ್ಯ, ಪಾರುಪತ್ಯೇಗಾರ್ ರಮೇಶ್ ಭಟ್, ಶ್ರೀ ರಾಘವೇಂದ್ರಭಟ್ ತಿಳಿಸಿದರು.
ಸುಬ್ರಮಣ್ಯಸ್ವಾಮಿಗೆ ದೇವಾಲಯದಲ್ಲಿ ಪಂಚಾಮೃತ, ಅಭಿಷೇಕ, ಮಹಾ ಮಂಗಳಾರತಿ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಅವರು ದೇವಿಗೆ ಅನ್ನ ಸಂತರ್ಪಣೆ ಮಾಡಿ, ಪೂಜಾ ಕೈಂಕರ್ಯ ಮಾಡಿದ ನಂತರ ತೆಂಗಿನಕಾಯಿ ಒಡೆದ ನಂತರ ಮಹಾಮಂಗಳಾರತಿ ನೀಡಿದರು. ಪೂಜೆಗೆ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.