
ಇತ್ತೀಚೆಗೆ ಭಾರತದಲ್ಲಿ ಸುರಕ್ಷಿತ ಮತ್ತು ಗುಣಮಟ್ಟದ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಜನರು ಅಗ್ಗದ ಬೆಲೆಗೆ ಉತ್ತಮ ಮೈಲೇಜ್ ಮತ್ತು ಸುರಕ್ಷತೆ ನೀಡುವ ಕಾರುಗಳನ್ನು ಆರಿಸುತ್ತಿದ್ದಾರೆ. ಅಂತಹ ಕಾರುಗಳಲ್ಲಿ ಟಾಟಾ (Tata Tiago) ಕಂಪನಿಯ ಟಿಯಾಗೋ ಪ್ರಮುಖವಾಗಿದೆ.
ಟಿಯಾಗೋ ಕಾರಿನ ಬೆಲೆ ಮತ್ತು ಮಾದರಿಗಳು
- ಟಿಯಾಗೋ ಕಾರು ₹5 ಲಕ್ಷ (ಎಕ್ಸ್ ಶೋರೂಮ್) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.
- ಟಾಪ್ ವೇರಿಯಂಟ್ ಬೆಲೆ ₹8.45 ಲಕ್ಷದವರೆಗೆ ಹೋಗುತ್ತದೆ.
- ಇದನ್ನು 12 ವಿಭಿನ್ನ ಮಾದರಿಗಳಲ್ಲಿ ಖರೀದಿಸಬಹುದು.
- ಪೆಟ್ರೋಲ್, CNG ಮತ್ತು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಲಭ್ಯವಿದೆ.
ಮೈಲೇಜ್ ಮತ್ತು ಎಂಜಿನ್ ವಿವರಗಳು
- ಟಿಯಾಗೋ ಕಾರು 19.43 ಕಿ.ಮೀ/ಲೀ. (ಪೆಟ್ರೋಲ್)ರಿಂದ 28.06 ಕಿ.ಮೀ/ಲೀ. (CNG)ವರೆಗೆ ಮೈಲೇಜ್ ನೀಡುತ್ತದೆ.
- 1.2 ಲೀಟರ್ ಪೆಟ್ರೋಲ್ ಮತ್ತು CNG ಎಂಜಿನ್ ಆಯ್ಕೆಗಳು ಲಭ್ಯವಿದೆ.
- 5-ಸ್ಪೀಡ್ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್ಬಾಕ್ಸ್ ಇರಲಿದೆ.
ಸುರಕ್ಷತೆ ಮತ್ತು ವೈಶಿಷ್ಟ್ಯಗಳು
- 2020 ರಲ್ಲಿ Global NCAP ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದಿದೆ.
- ಕೀಲೆಸ್ ಎಂಟ್ರಿ, ಪುಶ್ ಬಟನ್ ಸ್ಟಾರ್ಟ್, ಆಟೋ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮೊದಲಾದ ವೈಶಿಷ್ಟ್ಯಗಳಿವೆ.
- 10.25 ಇಂಚಿನ ಟಚ್ ಸ್ಕ್ರೀನ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಹ ಇದೆ.
- ರಿವರ್ಸ್ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್, ಆಟೋ ಹೆಡ್‌ಲ್ಯಾಂಪ್, ರೇನ್ ಸೆನ್ಸಿಂಗ್ ವೈಪರ್‌ಗಳು ಸಹ ಇದ್ದಾರೆ.
Bank loan ಮತ್ತು EMI ಆಯ್ಕೆ
- ಬೆಂಗಳೂರಿನಲ್ಲಿ ಟಿಯಾಗೋ XE ಪೆಟ್ರೋಲ್ ಆವೃತ್ತಿಯ ಆನ್-ರೋಡ್ ಬೆಲೆ ₹6 ಲಕ್ಷವರೆಗೆ ಇದೆ.
- ₹2 ಲಕ್ಷ ಡೌನ್ ಪೇಮೆಂಟ್ ಪಾವತಿಸಿದರೆ, ಉಳಿದ ₹4 ಲಕ್ಷಕ್ಕೆ ಸಾಲ ಲಭ್ಯವಿದೆ.
- ಶೇಕಡಾ 8 ಬಡ್ಡಿದರದಲ್ಲಿ, ತಿಂಗಳಿಗೆ ₹8,000 EMI ಪಾವತಿಸಬಹುದು.