Sunday, September 8, 2024
HomeMoviesTeluguಸೂಪರ್ ಸ್ಟಾರ್ Mahesh Babu ಸಹೋದರ Ramesh Babu ನಿಧನ

ಸೂಪರ್ ಸ್ಟಾರ್ Mahesh Babu ಸಹೋದರ Ramesh Babu ನಿಧನ

Hyderabad, Telangana : ಟಾಲಿವುಡ್ ಸೂಪರ್ ಸ್ಟಾರ್ ಕೃಷ್ಣ (Tollywood Superstar Krishna) ರವರ ಹಿರಿಯ ಪುತ್ರ, ಪ್ರಿನ್ಸ್ ಮಹೇಶ್ ಬಾಬು (Prince Mahesh Babu) ರವರ ಅಣ್ಣ ಘಟಮನೆನೀ ರಮೇಶ್ ಬಾಬು (Ghattamaneni Ramesh Babu) ಅವರು ಹೈದೆರಾಬಾದಿನಲ್ಲಿ (Hyderabad) ಶನಿವಾರ ರಾತ್ರಿ ನಿಧನರಾಗಿದ್ದಾರೆ. ದೀರ್ಘ ಕಾಲದಿಂದ ಲಿವರ್ ಸಂಬಂಧಿತ ಕಾಯಿಲೆಯಿಂದ ಅವರು ಬಳಲುತ್ತಿದ್ದು ಶನಿವಾರ ರಾತ್ರಿ ಚಿಕಿತ್ಸೆಗೆ ಹೋಗುವಾಗ ಮಾರ್ಗ ಮಧ್ಯದಲ್ಲೇ ಅಸುನೀಗಿದರು ಎಂದು GMB Entertainment official twitter ಮುಖಾಂತರ ತಿಳಿಸಲಾಯಿತು.

ಘಟಮನೆನೀ ರಮೇಶ್ ಬಾಬು ದಿನಾಂಕ 13 October 1965 ರಂದು ಮದ್ರಾಸ್ ನಲ್ಲಿ ಜನಿಸಿದ್ದರು. 1974 ರಲ್ಲಿ ತೆರೆಕಂಡ ಅಲ್ಲೂರಿ ಸೀತಾರಾಮರಾಜು (Alluri Seetaramaraju) ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದರು. ನಂತರ ದೇವುಡು ಚೇಸಿನ ದೊಂಗಳು, ನೀಡಾ ಮತ್ತು ಮುಗ್ಗುರು ಕೊಡುಕುಲು ಚಿತ್ರದಲ್ಲಿ ತಮ್ಮ ತಂದೆ ಹಾಗು ತಮ್ಮನ ಜೊತೆ ಅಭಿನಯಿಸಿದ್ದರು.1987 ರಲ್ಲಿ ತೆರೆಕಂಡ ಸಾಮ್ರಾಟ್ ಚಿತ್ರದ ಮೂಲಕ ಮೊದಲನೇ ಬಾರಿಗೆ ನಾಯಕ ನಟನಾಗಿ ನಟಿಸಿದರು. ನಂತರ ಚಿನ್ನಿ ಕೃಷ್ಣುಡು (Chinni Krishnudu), ಬಜಾರ್ ರೌಡಿ (Bazaar Rowdy), ಕಲಿಯುಗದ ಕರ್ನುಡು (Kaliyuga Karnudu), (Mugguru Kodukulu), Black Tiger, ಕೃಷ್ಣ ಗಾರಿ ಅಬ್ಬಾಯಿ (Krishna Gaari Abbayi), ಆಯುಧಮ್ (Ayudam), ಕಲಿಯುಗ ಅಭಿಮನ್ಯುಡು (Kaliyuga Abhimanyudu), ನಾ ಇಲ್ಲೇ ನಾ ಸ್ವರ್ಗಂ (Naa Illee Naa Swargam), ಮಾಮ ಕೊಡಲು (Mama Kodalu), ಅಣ್ಣ ಚೆಲ್ಲೆಲು (Anna Chellelu), ಪಚ್ಚ ತೋರಣಂ (Pacha Thoranam), Encounter ಚಿತ್ರಗಳಲ್ಲಿ ನಟಿಸಿದ್ದರು. ಇದರ ಜೊತೆಗೆ ಮಹೇಶ್ ಬಾಬು ಅಭಿನಯದ Arjun, Athidhi, Dookudu, Aagadu ಚಿತ್ರಗಳಿಗೆ ನಿರ್ಮಾಪಕರಾಗಿದ್ದರು.

ಈ ಮಧ್ಯೆಯೇ ನಟ ಮಹೇಶ್ ಬಾಬು Covid-19 ಸೋಂಕಿಗೆ ಒಳಗಾಗಿ Home Isolation ನಲ್ಲಿ ಇದ್ದಾರೆ. ಟಾಲಿವುಡ್ ನ ಪ್ರಮುಖರಾದ ಚಿರಂಜೀವಿ, ಬಾಲಕೃಷ್ಣ, ಮೋಹನ್ ಬಾಬು, ಪವನ್ ಕಲ್ಯಾಣ್ ಸೇರಿದಂತೆ ಅನೇಕರು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page