Home Business ಆಪಲ್‌ಗೂ ಸ್ಪರ್ಧೆ ನೀಡಲು “Trump Mobile” ಬರ್ತಾ ಇದೆ – ಬೆಲೆ, ಫೀಚರ್‌ಗಳು

ಆಪಲ್‌ಗೂ ಸ್ಪರ್ಧೆ ನೀಡಲು “Trump Mobile” ಬರ್ತಾ ಇದೆ – ಬೆಲೆ, ಫೀಚರ್‌ಗಳು

Trump Mobile

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಆಪಲ್ ಕಂಪನಿಗೆ ಪೈಪೋಟಿ ನೀಡಲು ತಮ್ಮದೇ ಹೊಸ ಮೊಬೈಲ್ ಬ್ರ್ಯಾಂಡ್ (Trump Mobile) ಆರಂಭಿಸಲು ತಯಾರಾಗಿದ್ದಾರೆ. ಆಪಲ್ ಕಂಪನಿ ತನ್ನ ಐಫೋನ್‌ಗಳನ್ನು ಅಮೆರಿಕದಲ್ಲಿ ತಯಾರಿಸಬೇಕೆಂಬ ಟ್ರಂಪ್ ಅವರ ಬೇಡಿಕೆಯನ್ನು ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ, ಅವರು ಹೊಸ ಟ್ರಂಪ್ ಮೊಬೈಲ್‌ನ್ನು ಮಾರುಕಟ್ಟೆಗೆ ತರುತ್ತಿದ್ದಾರೆ.

‘ಟ್ರಂಪ್ ಮೊಬೈಲ್ T1’ (Trump Mobile) ಹೆಸರಿನ ಈ ಮೊಬೈಲ್ ಆಗಸ್ಟ್ 2025ರಲ್ಲಿ ಮಾರುಕಟ್ಟೆಗೆ ಬರಬಹುದು. ಈ ಫೋನ್‌ನ್ನು ಟ್ರಂಪ್ ಅವರ ಪುತ್ರರಾದ ಎರಿಕ್ ಟ್ರಂಪ್ ಮತ್ತು ಡೊನಾಲ್ಡ್ ಟ್ರಂಪ್ ಜೂನಿಯರ್ ನ್ಯೂಯಾರ್ಕ್ನ ಟ್ರಂಪ್ ಟವರ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಫೋನ್‌ನ ವಿನ್ಯಾಸದಿಂದ ಉತ್ಪಾದನೆವರೆಗೆ ಎಲ್ಲವೂ ಅಮೆರಿಕದಲ್ಲೇ ನಡೆಯಲಿದೆ.

ಟ್ರಂಪ್ ಮೊಬೈಲ್ ವಿಶೇಷತೆಗಳು

  • ಫೋನ್ ಚಿನ್ನದ ಬಣ್ಣದಲ್ಲಿದೆ
  • ಮೊಬೈಲ್ ಡಿವೈಸ್ ಟ್ರಂಪ್ ಕಂಪನಿಯಿಂದ ತಯಾರಾಗದಿದ್ದರೂ, ಬೇರೆ ಕಂಪನಿಯಿಂದ ತಯಾರಿಸಿ ಟ್ರಂಪ್ ಬ್ರ್ಯಾಂಡ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ
  • ಪ್ರತಿ ತಿಂಗಳು ವಿಶೇಷ ಪ್ಲಾನ್‌ಗಿಂತಲೂ ಜಾಸ್ತಿಯಿಲ್ಲದ ದರದಲ್ಲಿ ಅನಿಯಮಿತ ಸೇವೆ ದೊರೆಯಲಿದೆ

ಬೆಲೆ ಮತ್ತು ಸೇವೆಗಳ ವಿವರ

  • ಮೊಬೈಲ್ ಬೆಲೆ: 499 ಡಾಲರ್ (ಸುಮಾರು ₹42,800)
  • ಪ್ಲಾನ್ 47: ಪ್ರತಿ ತಿಂಗಳು $47.75 (₹4080) ಪಾವತಿಸಬೇಕು
  • ಉಚಿತ ಟೆಲಿಹೆಲ್ತ್ ಸೇವೆ, ಡಿವೈಸ್ ಪ್ರೊಟೆಕ್ಷನ್, ಅನಿಯಮಿತ ಕರೆ, ಡೇಟಾ ಮತ್ತು ಮೆಸೇಜ್‌ಗಳು ಲಭ್ಯ

ಸ್ಪೆಷಲ್ ಸೆರ್ವಿಸ್ network ಮತ್ತು ಪ್ರೀ ಬುಕ್ಕಿಂಗ್: ಟ್ರಂಪ್ ಮೊಬೈಲ್ 100ಕ್ಕೂ ಹೆಚ್ಚು ದೇಶಗಳಲ್ಲಿ ತನ್ನದೇ ಆದ network ಮೂಲಕ ಉಚಿತ ಕರೆ ಸೌಲಭ್ಯ ಒದಗಿಸಲಿದೆ. ಜೂನ್ 16ರಿಂದ ಪ್ರೀ ಬುಕ್ಕಿಂಗ್ ಆರಂಭವಾಗಿದೆ. ಬುಕ್ಕಿಂಗ್‌ಗಾಗಿ 100 ಡಾಲರ್ (₹8,500) ಪಾವತಿಸಬೇಕಾಗುತ್ತದೆ.

ಇದು ಆಪಲ್, ಸ್ಯಾಮ್ಸಂಗ್ ಮುಂತಾದ ದೈತ್ಯ ಕಂಪನಿಗಳಿಗೆ ಟ್ರಂಪ್ ನೀಡುವ ಹೊಸ ಸವಾಲು ಆಗಲಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version