Tiptur, Tumakuru : ಅನುದಾನಿತ ಕಾಲೇಜು ನೌಕರರ (Aided College Workers) ಕುಂದುಕೊರತೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲೆಯ ಅನುದಾನಿತ ಪದವಿ ಪೂರ್ವ ನೌಕರರ ಸಂಘದ ವತಿಯಿಂದ ಅನುದಾನಿತ ಪದವಿ ಪೂರ್ವ ಕಾಲೇಜು ನೌಕರರು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Minister of Primary and Secondary Education B.C. Nagesh) ಅವರಿಗೆ ಮನವಿ ಸಲ್ಲಿಸಿದರು.
ಅನುದಾನಿತ ಕಾಲೇಜುಗಳ ಸಮಸ್ಯೆ ಸರ್ಕಾರದ ಗಮನಕ್ಕೆ ತಂದು ಸಾಧ್ಯವಾದಷ್ಟು ಶೀಘ್ರದಲ್ಲಿ ಉಪನ್ಯಾಸಕರ ಕೊರತೆ ನೀಗಿಸಲು ಕ್ರಮಕೈಗೊಳ್ಳುವುದಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, “Co9vid-1 ಹೊಡೆತದಿಂದ ಮಕ್ಕಳಲ್ಲಿ ಶಿಕ್ಷಣ ಕುಂಠಿತಗೊಳ್ಳುತ್ತಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಸಾಕಷ್ಟು ಕಾಲೇಜುಗಳಲ್ಲಿ ಉಪನ್ಯಾಸಕರು ಇಲ್ಲದೆ ಪಾಠ ಕಲಿಯುವುದು ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ ಇದರಿಂದ್ದಾಗಿ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.ರಾಜ್ಯದಲ್ಲಿ ಅನೇಕ ವಿದ್ಯಾಸಂಸ್ಥೆಗಳು ಶಿಕ್ಷಕರ ಕೊರತೆಯಿಂದ ಮುಚಲ್ಪಡುತ್ತಿದೆ” ಎಂದು ಹೇಳಿದರು.
ತುಮಕೂರು ಜಿಲ್ಲಾ ಅನುದಾನಿತ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಮತ್ತು ನೌಕರರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಕಾರ್ಯದರ್ಶಿ ತಿಪ್ಪೆಶ್, ನಿರ್ದೇಶಕರಾದ ಪುಟ್ಟಸ್ವಾಮಯ್ಯ, ಪರಮೇಶ್ವರ್, ಜಯರಾಮ್, ಉದಯ ಭಾರತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಕೆ.ಹಿಮಂತರಾಜು, ಉಪನ್ಯಾಸಕ ಕೆ.ಎಸ್.ಗಿರೀಶ್, ಎಸ್.ವಿ.ಪಿ.ಪದವಿಪೂರ್ವ ಕಾಲೇಜಿನ ವೀರೇಶ್ ಅಂಗಡಿ, ಪ್ರೊ. ಮಹಲಿಂಗಪ್ಪ, ಆರ್.ನಾಗರಾಜು ಉಪಸ್ಥಿತತರಿದ್ದರು.