Tumkur (Tumakuru) : ತುಮಕೂರು ನಗರದಲ್ಲಿ ಶುಕ್ರವಾರ CITU (Centre of Indian Trade Unions) ಸಂಘಟನೆಯ ಪದಾಧಿಕಾರಿಗಳು ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ Budget ವಿರೋಧಿಸಿ ಪ್ರತಿಭಟನೆ (Protest) ನಡೆಸಿದರು.
“Covid-19 ಸಂಕಷ್ಟದಲ್ಲಿರುವ ಸಾಮಾನ್ಯ ಜನರ ದುಡಿಮೆ ಮತ್ತು ಜೀವನೋಪಾಯಕ್ಕೆ ಯಾವುದೇ ಪರಿಹಾರ ನಿಡದೆ ಮೊಸ ಮಾಡಿದೆ’ ಎಂದು ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್.ವರಲಕ್ಷ್ಮಿ ತಿಳಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, “Covid-19 ಸಮಯದಲ್ಲಿ ದುಡಿಮೆ ಕಳೆದುಕೊಂಡು ಹಳ್ಳಿಗಳಿಗೆ ಹೋದವರಿಗೆ NREGA ಯೋಜನೆ ನೆರವಾಗಿತ್ತು. ಆದರೆ, ಸದ್ಯ ಬಜೆಟ್‌ನಲ್ಲಿ ಉದ್ಯೋಗ ಖಾತ್ರಿ ಯೋಜನೆ ಅನುದಾನವನ್ನು ಕಡಿತಗೊಳಿ ಜನರ ಉದ್ಯೋಗ ಕಸಿಯುವ ಕೆಲಸ ಮಾಡಿದ್ದಾರೆ” ಎಂದು ಹೇಳಿದರು.
CITU ಜಿಲ್ಲಾ ಘಟಕದ ಕಾರ್ಯದರ್ಶಿ ಎನ್.ಕೆ ಸುಬ್ರಮಣ್ಯ, ತಾಲ್ಲೂಕು ಘಟಕದ ಅಧ್ಯಕ್ಷ ಷಣ್ಮಖಪ್ಪ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಸುಜಿತ್ ನಾಯಕ್, ನಾಗರಾಜು, ಶಿವರಾಜು, ಶಿವಕುಮಾರ್ ಸ್ವಾಮಿ, ರಾಘವೇಂದ್ರ, ಕಲೀಲ್, ಎ.ಲೊಕೇಶ್ ಜಿ.ಕಮಲ, ಗುಲ್ಜಾರ್ ಬಾನು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.