back to top
24 C
Bengaluru
Saturday, August 30, 2025
HomeKarnatakaVijayapuraಸಿದ್ಧೇಶ್ವರ ಸಂಕ್ರಮಣ ಜಾತ್ರಾಮಹೋತ್ಸವ

ಸಿದ್ಧೇಶ್ವರ ಸಂಕ್ರಮಣ ಜಾತ್ರಾಮಹೋತ್ಸವ

- Advertisement -
- Advertisement -

Bijapur, Vijayapura : ವಿಜಯಪುರ ನಗರದ ಆರಾಧ್ಯ ದೈವ ಸಿದ್ಧೇಶ್ವರ ಸಂಕ್ರಮಣ ಜಾತ್ರಾಮಹೋತ್ಸವ (Siddeshwar Sankramana Jathre Mahotsava) ಅಂಗವಾಗಿ ಶುಕ್ರವಾರ ದೇವಸ್ಥಾನದಲ್ಲಿ(Shri Siddeshwar Temple) ಹೋಮ ಹವನ, ಪಲ್ಲಕ್ಕಿ, ನಂದಿಕೋಲ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಸಿ ದೇವಸ್ಥಾನದ ಎದುರು ಎಳ್ಳು ಬೆಲ್ಲ ವಿತರಣೆಯೊಂದಿಗೆ ಸ್ನೇಹ ಬಾಂಧವ್ಯ ಬೆಳೆಸಿಕೊಳ್ಳುವ ಸಂಕ್ರಮಣ ಆಚರಣೆ ಮಾಡಲಾಯಿತು. ಚಂದನದ ಕಟ್ಟಿಗೆ ಎಳ್ಳು ಧಾನ್ಯಗಳಿಂದ ಕೂಡಿದ ಕಟ್ಟೆಯ ಮೇಲೆ ಹಾವೇರಿ ಜಿಲ್ಲೆಯ ಪಕಿರಯ್ಯ ಶಾಸ್ತ್ರೀಗಳ ನೇತೃತ್ವದಲ್ಲಿ ಹೋಮ ಹವನ ಕಾರ್ಯಕ್ರಮಗಳು ನಡೆದವು.

ಸಿದ್ಧೇಶ್ವರ ಸಂಸ್ಥೆ ಉಪಾಧ್ಯಕ್ಷ ಸಂ.ಗು.ಸಜ್ಜನ, ಚೇರ್ಮನ್‌ ಬಸಯ್ಯ ಹಿರೇಮಠ, ನಗರ ಶಾಸಕರ ಪುತ್ರ ರಾಮನಗೌಡ ಪಾಟೀಲ ಯತ್ನಾಳ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಈರಯ್ಯ ಶಾಸ್ರ್ತಿ, ಮಂಜಯ್ಯ ಶಾಸ್ತ್ರಿ, ಸಿದ್ದಯ್ಯ ಶಾಸ್ತ್ರಿ, ಸಿದ್ಧರಾಮಯ್ಯ ಶಾಸ್ತ್ರಿ ಸಂಸ್ಥೆಯ ಕಾರ್ಯದರ್ಶಿ ಸದಾನಂದ ದೇಸಾಯಿ, ಜಂಟಿ ಕಾರ್ಯದರ್ಶಿ ಬಿ.ಎಸ್.ಸುಗೂರ, ಜಾತ್ರಾ ಸಮಿತಿ ಎಸ್.ಸಿ.ಉಪ್ಪಿನ, ಸದಾಶಿವ ಗುಡ್ಡೋಡಗಿ, ಎಸ್.ಎಚ್.ನಾಡಗೌಡ, ಎಂ.ಎಂ.ಸಜ್ಜನ, ನಾಗಪ್ಪ ಗುಗ್ಗರಿ, ಬಸವರಾಜ ಗಣಿ ಮತ್ತಿತರರು ಉಪಸ್ಥಿತರಿದ್ದರು.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page