Tumkur (Tumakuru) : ಫೆಬ್ರವರಿ 27 ರಿಂದ ಮಾರ್ಚ್ 9 ರ ವರೆಗೆ ತುಮಕೂರು ತಾಲ್ಲೂಕಿನ ಅರೆಯೂರು ಗ್ರಾಮದ ಐತಿಹಾಸಿಕ ಪುಣ್ಯಕ್ಷೇತ್ರ ಜ್ಯೋತಿರ್ಲಿಂಗ ವೈದ್ಯನಾಥೇಶ್ವರ ಸ್ವಾಮಿಯ (Areyuru Shree Vaidyanatheshwara Temple) 23ನೇ ವರ್ಷದ ಜಾತ್ರಾ ಮಹೋತ್ಸವ (Jathre Mahotsava) ನಡೆಯಲಿದೆ. ‘ಸಕಲ ರೋಗಗಳ ನಿವಾರಣೆಗೆ ಸ್ವಾಮಿಯ ದರ್ಶನ ಒಂದೇ ದಾರಿ’ ಎಂದು ನಂಬಿಕೆಯನ್ನಿಟ್ಟುಕೊಂಡ ಭಕ್ತರು ವೈದ್ಯನಾಥೇಶ್ವರ ಸ್ವಾಮಿಯ ದರ್ಶನ ಪಡೆಯುತ್ತಾರೆ.
ಮಹಾರುದ್ರಾಭಿಷೇಕ, ಧ್ವಜಾರೋಹಣ, ರಥದ ಕಳಸಾರೋಹಣ ಫೆಬ್ರವರಿ 27ರಂದು ನಡೆಯಲಿದ್ದು ಫೆಬ್ರವರಿ 28ರಂದು ಗಿರಿಜಾ ಕಲ್ಯಾಣಮಹೋತ್ಸವ ಹಾಗೂ ಹೋಮ ಹಾಗೂ ಮಾರ್ಚ್ 1ರಂದು ಮಹಾ ಶಿವರಾತ್ರಿಯ ದಿನ ವೈದ್ಯನಾಥೇಶ್ವರ ಸ್ವಾಮಿ ಮಹಾರಥೋತ್ಸವ ನಡೆಯಲಿದೆ.
ಮಾರ್ಚ್ 2ರಂದು ಅಕ್ಕಿಪೂಜೆ, ನಂದಿ ವಾಹನ. ಮಾರ್ಚ್ 3ರಂದು ಕುದುರೆವಾಹನ, ಮಾರ್ಚ್ 4ರಂದು ಹುಲಿವಾಹನ, ಮಾರ್ಚ್ 5ರಂದು ಬಸವ ವಾಹನ, ಮಾರ್ಚ್ 6ರಂದು ಹೂವಿನ ವಾಹನ, ಮಾರ್ಚ್ 7ರಂದು ಕುದುರೆ ವಾಹನ, ಮಾರ್ಚ್ 8ರಂದು ಮುತ್ತಿನ ಪಲ್ಲಕ್ಕಿ ಉತ್ಸವ, ಮಾರ್ಚ್ 9ರಂದು ತೆಪ್ಪೋತ್ಸವ ನಡೆಯಲಿದೆ.