Friday, September 30, 2022
HomeKarnatakaRamanagaraಶಂಭುನಾಗಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ

ಶಂಭುನಾಗಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ

kanakapura, Ramanagara : ಶಿವರಾತ್ರಿ (Mahashivaratri) ಅಂಗವಾಗಿ ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಕೋಟೆಕೊಪ್ಪ ಬೋರೆಹೊಲ ಕ್ಷೇತ್ರದಲ್ಲಿ ಶಂಭುನಾಗಲಿಂಗೇಶ್ವರಸ್ವಾಮಿ (Borehola Kshethra Sri Shambhu Nagalingeshwara Temple) ಜಾತ್ರಾ ಮಹೋತ್ಸವವು (Jathre Mahotsava) ಬುಧವಾರ ಅದ್ಧೂರಿಯಾಗಿ ನೆರೆವೇರಿತು. ಕ್ಷೇತ್ರದ ಧರ್ಮಗುರು ರಾಜುಸ್ವಾಮಿ ಅವರು ಮುಂಜಾನೆ ಶಂಭುನಾಗಲಿಂಗೇಶ್ವರಸ್ವಾಮಿಗೆ ರುದ್ರಾಭಿಷೇಕ, ಮಹಾ ಮಂಗಳಾರತಿ, ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು. ಮಧ್ಯಾಹ್ನ ಹಾಲರವಿ ಸೇವೆ ಜತೆಗೆ ಚಿಕ್ಕಮ್ಮದೇವಿ ಪೂಜಾ ಕುಣಿತ, ಮಹಾರಥೋತ್ಸವಕ್ಕೆ ಭಾಗ್ಯಮ್ಮ ರಾಜುಸ್ವಾಮಿ ಚಾಲನೆ ನೀಡಿದರು. ರಾತ್ರಿ ಶಿವಕಥೆ ಜಾಗರಣೆ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಅರಕೆರೆ ಚಂದ್ರಮ್ಮ ಉದ್ಘಾಟನೆ ಮಾಡಿದರು.

‘ಉರಿಗೆಂಡದೊಡೆಯ ಶ್ರೀ ಶಂಭುನಾಗಲಿಂಗೇಶ್ವರ ಸ್ವಾಮಿ’ ಭಕ್ತಿಗೀತೆ ಧ್ವನಿಸುರುಳಿಯನ್ನು ಕನಕಪುರದ ಸಾಹಿತಿ ಗಾಯಕ ಎಚ್.ಸಿ ಹೊಳಸಾಲಯ್ಯ ದಾನವ್ ಬಿಡುಗಡೆ ಮಾಡಿದರು. ಬುಯ್ಯನದೊಡ್ಡಿಯ ರೇವಣ್ಣ ತಂಡ, ಚೀಲೂರಿನ ಸುರೇಶ್ ತಂಡ ಪೂಜಾ ಕುಣಿತ, ಅಚ್ಚಲಿನ ಎ.ಕೆ. ರಾಜು ಮತ್ತು ಪ್ರವಿಣ್ ಕುಮಾರ್ ತಂಡ ತಮಟೆವಾದನ ನಡೆಸಿಕೊಟ್ಟರು. ಮಂಡ್ಯ ಜಿಲ್ಲೆ ಕೀರ್ತನಾಕಾರ ಡಾ. ಎಂ. ಸಚಿನ್ ‘ಶ್ರೀ ಶಂಭುನಾಗಲಿಂಗೇಶ್ವರ ಸ್ವಾಮಿ ವೈಭವ’ ಎಂಬ ಭಕ್ತಿಪ್ರಧಾನ ಶಿವಕಥೆಯನ್ನು ಹಾಡಿದರು. ಗಾಯಕ ಎಚ್.ಸಿ ಹೊಳಸಾಲಯ್ಯ ದಾನವ್, ಪ್ರದೀಪ್ ಮೌರ್ಯ ಭಕ್ತಿಗೀತೆ ಕಾರ್ಯಕ್ರಮ, ಬೆಂಗಳೂರಿನ ಸಂಧ್ಯಾ, ಅರಕೆರೆ ನಾಗರತ್ನ, ಸುಮ, ಸುಧಾ, ಮಹೇಶ್, ಮಂಜು, ಪ್ರಕಾಶ್, ಅರ್ಪಿತ, ಕಿರಣ್ ಕುಮಾರ್ ಜಾನಪದ ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಬಾಳಪುರದೊಡ್ಡಿ ಸ್ವಾಮಿ, ಕೆ.ದಾಸರಹಳ್ಳಿ ರವಿಕಿರಣ್, ಬೆಂಗಳೂರಿನ ಮುನಿಕೃಷ್ಣ, ಹೊಸದುರ್ಗಾ ಹೊಂಬಾಳಮ್ಮ, ಪೋಲಿಸ್ ಇಲಾಖೆಯ ಕೆಂಗೇರಿ ಹೊನ್ನದಾಸೇಗೌಡ, ಕೂಡಲ ಸಂಗಮ ಮಂಜುನಾಥ್‌ ಪಾಲ್ಗೊಂಡಿದ್ದರು.

- Advertisement -

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

- Advertisment -

Most Popular

Karnataka

India

You cannot copy content of this page