back to top
21.7 C
Bengaluru
Wednesday, September 17, 2025
HomeTechnologyGadgetsನಾಳೆ Vivo X200 ಸರಣಿಯ ಮೂರು ಫೋನ್‌ಗಳು ಲಾಂಚ್

ನಾಳೆ Vivo X200 ಸರಣಿಯ ಮೂರು ಫೋನ್‌ಗಳು ಲಾಂಚ್

- Advertisement -
- Advertisement -

ವಿವೋ (Vivo) ಪ್ರಿಯರಿಗಾಗಿ ನಾಳೆ (ಡಿಸೆಂಬರ್ 12) ಸಂತೋಷದ ದಿನವಾಗಿದೆ. Vivo X200 ಸರಣಿಯು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಸರಣಿಯಲ್ಲಿ Vivo X200, Vivo X200 Pro ಮತ್ತು Vivo X200 Pro Mini ಫೋನ್‌ಗಳು ಮಾರುಕಟ್ಟೆಗೆ ಬರಲಿದೆ.

ವಿವೋ X100 ಸರಣಿಯನ್ನು ಜನವರಿಯಲ್ಲಿ ಬಿಡುಗಡೆ ಮಾಡಿದ ಕಂಪನಿಯು, ಇದೀಗ X200 ಸರಣಿಯನ್ನು ನಾಳೆ ಮಧ್ಯಾಹ್ನ 12 ಗಂಟೆಗೆ ಅನಾವರಣಗೊಳ್ಳಲು ಸಿದ್ಧವಾಗಿದೆ. ಈ ಫೋನ್‌ಗಳು 50MP ಕ್ಯಾಮೆರಾಗಳೊಂದಿಗೆ, MediaTek Dimensity 9400 ಪ್ರೊಸೆಸರ್, 6.67 ಮತ್ತು 6.78 ಇಂಚಿನ ಡಿಸ್ಪ್ಲೇ, 512GB ಸ್ಟೋರೇಜ್, 6000mAh ಬ್ಯಾಟರಿ ಮತ್ತು 90W ಫಾಸ್ಟ್ ಚಾರ್ಜಿಂಗ್ ಅನ್ನು ಒಳಗೊಂಡಿರುತ್ತವೆ.

ಬೆಲೆ ಮತ್ತು ಲಭ್ಯತೆ: Vivo X200 12GB + 256GB ರೂಪಾಂತರಿ ಬೆಲೆ ₹65,999 ಮತ್ತು 16GB + 512GB ರೂಪಾಂತರಿ ಬೆಲೆ ₹71,999 ಇರಲಿದೆ. Vivo X200 Pro 16GB + 512GB ರೂಪಾಂತರಿ ಬೆಲೆ ₹94,999 ಆಗಿರಬಹುದು. ಈ ಫೋನ್‌ಗಳು ಅಮೆಜಾನ್, ಫ್ಲಿಪ್ಕಾರ್ಟ್ ಮತ್ತು Vivo ಇಂಡಿಯಾ ಇ-ಸ್ಟೋರ್ ನಲ್ಲಿ ಲಭ್ಯವಿರುತ್ತವೆ.

ವೈಶಿಷ್ಟ್ಯಗಳು

  • ಡಿಸ್ಪ್ಲೇ: Vivo X200: 6.67 ಇಂಚಿನ ಡಿಸ್ಪ್ಲೇ
  • Vivo X200 Pro: 6.78 ಇಂಚಿನ ಡಿಸ್ಪ್ಲೇ
  • 120Hz ಡೈನಾಮಿಕ್ ರಿಫ್ರೆಶ್ ದರ ಮತ್ತು 4500 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್‌
  • ಪ್ರೊಸೆಸರ್: MediaTek Dimensity 9400
  • 16GB RAM, 512GB ಸ್ಟೋರೇಜ್
  • ಕ್ಯಾಮೆರಾ: Vivo X200: 50MP + 50MP + 50MP
  • Vivo X200 Pro: 50MP + 50MP + 200MP Zeiss APO ಟೆಲಿಫೋಟೋ ಲೆನ್ಸ್
  • 32MP ಸೆಲ್ಫಿ ಕ್ಯಾಮೆರಾ
  • ಬ್ಯಾಟರಿ ಮತ್ತು ಚಾರ್ಜಿಂಗ್: Vivo X200: 5800mAh
  • Vivo X200 Pro: 6000mAh
  • 90W ವೈರ್ಡ್ ಫಾಸ್ಟ್ ಚಾರ್ಜಿಂಗ್

ಈ ಫೋನ್‌ಗಳು ಕಾಸ್ಮೊಸ್ ಬ್ಲಾಕ್, ನ್ಯಾಚುರಲ್ ಗ್ರೀನ್, ಟೈಟಾನಿಯಂ ಗ್ರೇ ಬಣ್ಣಗಳಲ್ಲಿ ಲಭ್ಯವಾಗುತ್ತವೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page