ಜೀವನದ ಕೊನೆಯ ಹಂತದಲ್ಲಿ ಕೆಲವು ಕಾಯಿಲೆಗಳು ತೀವ್ರವಾಗಿ ಕಾಡುವುದು. ಇದರಲ್ಲಿ ಮುಖ್ಯವಾಗಿ ಅಲ್ಝೈಮರ್ (Alzheimer’s) ಎನ್ನುವುದು. ಇದು ಮನುಷ್ಯನಲ್ಲಿ ನೆನಪಿನ ಶಕ್ತಿಯನ್ನು ಕುಂದಿಸಿ ಬಿಡುವುದು. ಅಲ್ಝೈಮರ್ ಇರುವಂತಹ ವ್ಯಕ್ತಿ ಕೆಲವೊಮ್ಮೆ ತಾವು ಏನು ಮಾತನಾಡಿದ್ದೇವೆ ಎನ್ನುವುದು ಕೂಡ ನೆನಪಿನಲ್ಲಿ ಇರಲ್ಲ ಮತ್ತು ಕೆಲವು ವಸ್ತುಗಳು ಹಾಗೂ ತಿಂದರೆ ಆಹಾರವು ಅವರಿಗೆ ನೆನಪಿರದು.
ಅಲ್ಝೈಮರ್ (Alzheimer’s) ಮೆದುಳಿನ ಕೋಶಗಳ ಮೇಲೆ ಪರಿಣಾಮ ಬೀರುವ ತೀವ್ರವಾದ ನ್ಯೂರೋಡಿಜೆನರೇಟಿವ್ (neurodegenerative) ಕಾಯಿಲೆಯಾಗಿದೆ. ಇದು ಕ್ರಮೇಣ, ಸ್ಮರಣೆ, ಆಲೋಚನಾ ಸಾಮರ್ಥ್ಯ ಮತ್ತು ನಡವಳಿಕೆಯನ್ನು ದುರ್ಬಲಗೊಳಿಸುತ್ತದೆ.
ಇದು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದರು ಸಹ ನಮ್ಮ ಕೆಲವು ದೈನಂದಿನ ಅಭ್ಯಾಸಗಳು ಅಲ್ಝೈಮರ್ (Alzheimer) ಅಪಾಯವನ್ನು ಹೆಚ್ಚಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.
ಮೆದುಳಿಗೆ ಹಾನಿ ಮಾಡಿ ಅಲ್ಝೈಮರ್ ನಂತಹ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುವ ಕೆಲವು ಸಾಮಾನ್ಯ ಅಭ್ಯಾಸಗಳು.
ನಿದ್ರೆಯ ಕೊರತೆ
ಸಾಕಷ್ಟು ನಿದ್ರೆಯ ಕೊರತೆಯು (lack of sleep) ಮೆದುಳಿಗೆ ಹಾನಿ ಮಾಡುತ್ತದೆ. ನಿಯಮಿತವಾಗಿ ಕಡಿಮೆ ನಿದ್ರೆ ಮಾಡುವುದರಿಂದ ಮೆದುಳಿನಲ್ಲಿ ಜೀವಾಣುಗಳು ಸಂಗ್ರಹವಾಗಬಹುದು. ಇದು ಅಲ್ಝೈಮರ್ ಅಪಾಯವನ್ನು ಹೆಚ್ಚಿಸುತ್ತದೆ.
ಅಧಿಕ ಸಕ್ಕರೆ-ಸಂಸ್ಕರಿಸಿದ ಆಹಾರದ ಸೇವನೆ
ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರವು (Sugar and processed food) ಮೆದುಳಿಗೆ ಹಾನಿ ಮಾಡುತ್ತದೆ. ಈ ಆಹಾರಗಳ ಅತಿಯಾದ ಸೇವನೆಯು ಮೆದುಳಿನ ಕೋಶಗಳ ನಡುವಿನ ಸಂಪರ್ಕವನ್ನು ದುರ್ಬಲಗೊಳಿಸುತ್ತದೆ. ಇದು ಮೆಮೊರಿ ಮತ್ತು ಮೆದುಳಿನ ಕಾರ್ಯಕ್ಷಮತೆಯ ಕುಸಿತಕ್ಕೆ ಕಾರಣವಾಗಬಹುದು.
ಒಂಟಿತನ
ದೀರ್ಘಕಾಲದ ವರೆಗೆ ಸಾಮಾಜಿಕ ಸಂಬಂಧಗಳಿಂದ ದೂರವಿರುವುದು ಅಲ್ಝೈಮರ್ ಕಾಯಿಲೆಗೆ ಕಾರಣವಾಗಬಹುದು. ಅಲ್ಲದೆ ಒಂಟಿತನವು (Loneliness) ಮೆದುಳಿನ ಚಟುವಟಿಕೆಯ ಕುಸಿತಕ್ಕೆ ಕಾರಣವಾಗುತ್ತದೆ. ಇದು ಮಾನಸಿಕ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಹಾಗಾಗಿ ಈ ಎಲ್ಲಾ ಅಭ್ಯಾಸಗಳಿಂದ ದೂರವಿರುವ ಮೂಲಕ, ನಮ್ಮ ಮೆದುಳನ್ನು ಸಕ್ರಿಯವಾಗಿ ಮತ್ತು ಆರೋಗ್ಯಕರವಾಗಿಡಲು ಸರಿಯಾದ ಕ್ರಮಗಳನ್ನು ಅನುಸರಿಸುವ ಮೂಲಕ, ಅಲ್ಝೈಮರ್ ನಂತಹ ಕಾಯಿಲೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.
ಹೊಸ ಹೊಸ ಸವಾಲುಗಳನ್ನು ಸ್ವೀಕರಿಸುವುದು, ಯಾವಾಗಲೂ ಕ್ರಿಯಾಶೀಲರಾಗಿರುವುದು ಮನಸ್ಸನ್ನು ನಿರಂತರವಾಗಿ ಕಾರ್ಯನಿರತವಾಗಿರಿಸುತ್ತದೆ ಅಲ್ಲದೆ ಇವು ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು.
ವ್ಯಾಯಾಮವು ಮೆದುಳಿನಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ನರಕೋಶದ ಕಾರ್ಯವನ್ನು ಸುಧಾರಿ, ಅಲ್ಝೈಮರ್ ಅಪಾಯವನ್ನು ಕಡಿಮೆ ಮಾಡುತ್ತದೆ.