Bengaluru : ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಮುಚ್ಚದೆ ನಿರ್ಲಕ್ಷ್ಯ ತೋರಿದ ಆರೋಪದಲ್ಲಿ BBMP ಇಬ್ಬರು ಕಾರ್ಯನಿರ್ವಾಹಕ Engineer ಗಳನ್ನು ಅಮಾನತು ಮಾಡಿ (Suspension), ನಾಲ್ವರು ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ನೋಟಿಸ್ (Notice) ನೀಡಿದೆ.
ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲು ವಲಯವಾರು ಕೈಗೊಂಡಿರುವ ಕ್ರಮಗಳ ಬಗ್ಗೆ ಹಲವಾರು ಪರಿಶೀಲನಾ ಸಭೆಗಳನ್ನು ನಡೆಸಲಾಗಿದ್ದು ಮುಖ್ಯ ರಸ್ತೆಗಳು, ಉಪ ಮುಖ್ಯ ರಸ್ತೆಗಳು ಹಾಗೂ ವಾರ್ಡ್ ರಸ್ತೆಗಳನ್ನು ಮುಚ್ಚಲು ತ್ವರಿತ ಕ್ರಮ ಕೈಗೊಳ್ಳುವಂತೆ ಪಾಲಿಕೆಯ ಮುಖ್ಯ ಆಯುಕ್ತರು ಸೂಚಿಸಿದ್ದರು. ಎಲ್ಲಾ ರಸ್ತೆಗಳ ಗುಂಡಿ ಮುಚ್ಚುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಸಹ ನಿರ್ದೇಶನ ನೀಡಿದ್ದು, ಗುಂಡಿ ಮುಚ್ಚಲು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಅಮಾನತು ಆದವರು: ಎನ್.ಎಸ್.ರೇವಣ್ಣ (ಪ್ರಭಾರ ಕಾರ್ಯಪಾಲಯ ಎಂಜಿನಿಯರ್, ಗಾಂಧಿನಗರ): ಗಾಂಧಿನಗರ (Gandhi Nagar) ವಿಭಾಗದಲ್ಲಿ 787 ಗುಂಡಿಗಳಿದ್ದು, 67 ಗುಂಡಿಗಳನ್ನಷ್ಟೇ ಮುಚ್ಚಿ ಶೇ 9 ಪ್ರಗತಿ.
ಸಿ.ಎಂ. ಶಿವಕುಮಾರ್(ಕಾರ್ಯಪಾಲಕ ಎಂಜಿನಿಯರ್, ಯಲಹಂಕ ವಿಭಾಗ): ಯಲಹಂಕ (Yelahanka) ವಿಭಾಗದಲ್ಲಿ 18 ಗುಂಡಿಗಳಿದ್ದು, ಕೇವಲ 5 ಗುಂಡಿಗಳನ್ನು ಮುಚ್ಚಿ ಶೇ 28 ಪ್ರಗತಿ.
ನೋಟಿಸ್ ಪಡೆದವರು: ಇ.ರಾಮಕೃಷ್ಣಪ್ಪ (ಕಾರ್ಯಪಾಲಕ ಎಂಜಿನಿಯರ್, ಶಿವಾಜಿನಗರ): ಶಿವಾಜಿನಗರ (Shivaji Nagar ವಿಭಾಗದಲ್ಲಿ 298 ಗುಂಡಿಗಳಿದ್ದು, 127 ಗುಂಡಿಗಳನ್ನು ಮುಚ್ಚಿ ಶೇ 43 ಪ್ರಗತಿ.
ಮೋಹನದಾಸ್ (ಪ್ರಭಾರ ಕಾರ್ಯಪಾಲಕ ಎಂಜಿನಿಯರ್, ಬ್ಯಾಟರಾಯನಪುರ): ಬ್ಯಾಟರಾಯನಪುರ (Byatarayanapura) ವಿಭಾಗದಲ್ಲಿ 239 ಗುಂಡಿಗಳಿದ್ದು, 76 ಗುಂಡಿಗಳನ್ನಷ್ಟೇ ಮುಚ್ಚಿ ಶೇ 32 ಪ್ರಗತಿ.
ಎಚ್.ಎಸ್.ಮಹದೇಶ್ (ಕಾರ್ಯಪಾಲಕ ಎಂಜಿನಿಯರ್, ಬೊಮ್ಮನಹಳ್ಳಿ): ಬೊಮ್ಮನಹಳ್ಳಿ (Bommanahalli) ರಸ್ತೆ ಮೂಲಸೌಕರ್ಯ ವಿಭಾಗದ ವ್ಯಾಪ್ತಿಯಲ್ಲಿ 13 ಗುಂಡಿಗಳಿದ್ದು, 4 ಗುಂಡಿಗಳನ್ನು ಮಾತ್ರ ಮುಚ್ಚಿ ಶೇ 31 ಪ್ರಗತಿ.
ಎಚ್.ವಿ.ಯರಪ್ಪ ರೆಡ್ಡಿ (ಕಾರ್ಯಪಾಲಕ ಎಂಜಿನಿಯರ್, ದಾಸರಹಳ್ಳಿ): ದಾಸರಹಳ್ಳಿ (Dasarahalli) ರಸ್ತೆ ಮೂಲಸೌಕರ್ಯ ವಿಭಾಗದಲ್ಲಿ 17 ಗುಂಡಿಗಳಿದ್ದು, 5 ಗುಂಡಿಗಳನ್ನು ಮಾತ್ರ ಮುಚ್ಚಿ ಶೇ 29 ಪ್ರಗತಿ ಸಾಧನೆ.