New Delhi: ದೆಹಲಿಯ (Delhi) ರೋಹಿಣಿಯ ಪ್ರಶಾಂತ್ ವಿಹಾರ್ ಪ್ರದೇಶದ CRPF ಶಾಲೆಯ (CRPF School) ಬಳಿ ಭಾನುವಾರ ಬೆಳಗ್ಗೆ ಭಾರಿ ಸ್ಫೋಟ ಸಂಭವಿಸಿತ್ತು. ಅದರ ಬೆನ್ನಲ್ಲೇ ಸೋಮವಾರ ತಡರಾತ್ರಿ ದೇಶಾದ್ಯಂತ ಇರುವ CRPF ಶಾಲೆಗಳಿಗೆ ಇಮೇಲ್‌ನಲ್ಲಿ (E-Mail) ಮತ್ತೊಂದು ಬೆದರಿಕೆ ಬಂದಿದೆ.
ಈ ಬೆದರಿಕೆ ದೆಹಲಿಯಿಂದ ಎಲ್ಲಾ ಶಾಲೆಗಳಲ್ಲಿ ಭೀತಿಯನ್ನು ಉಂಟುಮಾಡಿದೆ. ಈ ಶಾಲೆಗಳ ಆಡಳಿತ ಮಂಡಳಿಗೆ ಇಮೇಲ್ ಮೂಲಕ ಬೆದರಿಕೆಯನ್ನು ರವಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಬಾಂಬ್ ಬೆದರಿಕೆ ಪಟ್ಟಿ ಮಾಡಲಾದ ಶಾಲಾ ಕೊಠಡಿಗಳಲ್ಲಿ ನೈಟ್ರೇಟ್ ಆಧಾರಿತ ಸುಧಾರಿತ ಸ್ಪೋಟಕಗಳನ್ನು ಇಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಸ್ಪೋಟಗೊಳ್ಳುವ ಮೊದಲು ಶಾಲೆಗಳನ್ನು ಬೇರೆ ಕಡೆಗೆ ಶಿಫ್ಟ್ ಮಾಡಲು ಇಮೇಲ್‌ನಲ್ಲಿ ತಿಳಿಸಿದ್ದಾರೆ.
ದೆಹಲಿಯ ರೋಹಿಣಿಯಲ್ಲಿರುವ CRPF ಶಾಲೆಯಲ್ಲಿ ಈಗಾಗಲೇ ಸ್ಫೋಟ ಸಂಭವಿಸಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ, ಈ ಸ್ಫೋಟದ ಹಿಂದೆ ಯಾರಿದ್ದಾರೆ ಎಂದು ಇನ್ನೂ ತಿಳಿದುಬಂದಿಲ್ಲ.
ಮೂಲಗಳ ಪ್ರಕಾರ, ಸೋಮವಾರ ತಡರಾತ್ರಿ ಕಳುಹಿಸಲಾದ ಹೊಸ ಮೇಲ್ನಲ್ಲಿ, ಇತ್ತೀಚೆಗೆ ಡಿಎಂಕೆಯ ಜಾಫರ್ ಸಾದಿಕ್ ಅವರನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ ಪರಿಣಾಮದಿಂದಾಗಿ, ಅಂತರಾಷ್ಟ್ರೀಯ ಒತ್ತಡವು ಹೆಚ್ಚಿದೆ.
DMK ಪಕ್ಷದ ಮೇಲೆ ತಮಿಳುನಾಡು ಪೊಲೀಸರು ಮತ್ತು ಗುಪ್ತಚರ ಹೆಚ್ಚು ಗಮನಹರಿಸಿವೆ. ಪ್ರಕರಣದಲ್ಲಿ ಎಂಕೆ ಸ್ಟಾಲಿನ್ ಕುಟುಂಬ ಭಾಗಿಯಾಗಿರುವುದರಿಂದ ಆ ಗಮನವನ್ನು ಬೇರೆಡೆಗೆ ಸೆಳೆಯಲು ಕೇಂದ್ರೀಯ (ಯೂನಿಯನ್) ಸರ್ಕಾರಿ ಶಾಲೆಗಳ ಸಮೀಪದಲ್ಲಿ ಇಂತಹ ಸ್ಫೋಟಗಳನ್ನು ಮಾಡುವುದು ನಮಗೆ ಅನಿವಾರ್ಯವಾಗಿದೆ. ಶೀಘ್ರದಲ್ಲೇ ಬಾಂಬ್ ಸ್ಫೋಟಿಸುವುದಾಗಿ ಇಮೇಲ್‌ನಲ್ಲಿ ತಿಳಿಸಲಾಗಿದೆ. ಬಾಂಬ್ ಬೆದರಿಕೆಯೊಡ್ಡಿದವನು ತನ್ನನ್ನು ಕಿರುತಿಗ ದೇವಡಿಯಾ ಎಂದು ಹೇಳಿದ್ದಾನೆ.