Wednesday, April 17, 2024
HomeKarnatakaChikkaballapuraಚಿಂತಾಮಣಿ ಶಾಸಕರಿಂದ ರಸ್ತೆ ಕಾಮಗಾರಿ ಪರಿಶೀಲನೆ

ಚಿಂತಾಮಣಿ ಶಾಸಕರಿಂದ ರಸ್ತೆ ಕಾಮಗಾರಿ ಪರಿಶೀಲನೆ

Chintamani : ಚಿಂತಾಮಣಿ ತಾಲ್ಲೂಕಿನ ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುನ್ನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಮುಖ್ಯ ರಸ್ತೆ ಕಾಮಗಾರಿಯನ್ನು (Road Construction) ಶಾಸಕ ಎಂ.ಕೃಷ್ಣಾರೆಡ್ಡಿಯವರು (M. Krishna Reddy [AKA] JK Krishna Reddy) ಪರಿಶೀಲಿಸಿದರು.

ಜನರ ತೆರಿಗೆ ಹಣದಿಂದ ಸರ್ಕಾರಿ ಕಾಮಗಾರಿಗಳು ನಡೆಯಲಿದ್ದು ಪ್ರತಿಯೊಬ್ಬರಿಗೂ ಕೇಳುವ ಅಧಿಕಾರವಿರುತ್ತದೆ. ತಮ್ಮ ತಮ್ಮ ಗ್ರಾಮಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಸಾರ್ವಜನಿಕರು ಗಮನಹರಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕವಾಗಿ ಮೇಲ್ವಿಚಾರಣೆ ನಡೆಸಿ ಗುತ್ತಿಗೆದಾರರಿಗೆ ಸಲಹೆ, ಸೂಚನೆಗಳನ್ನು ನೀಡಬೇಕು. ಪಾಲಿಸದಿದ್ದರೆ ಶಾಸಕರ ಗಮನಕ್ಕೆ ತರಬೇಕು. ಸರ್ಕಾರಿ ಕಾಮಗಾರಿಗಳ ಬಗ್ಗೆ ಉದಾಸೀನತೆ ತೋರಿ ಕಳಪೆ ಕಾಮಗಾರಿ ಕಂಡುಬಂದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಶಾಸಕರು ಹೇಳಿದರು.

ಮುಖಂಡರಾದ ಕೊಂಗನಹಳ್ಳಿ ಶಿವಾರೆಡ್ಡಿ, ತಾ.ಪ. ಮಾಜಿ ಸದಸ್ಯ ಎಚ್. ನಾರಾಯಣಸ್ವಾಮಿ, ಗುನ್ನಹಳ್ಳಿ ಬೈರೆಗೌಡ, ಗ್ರಾ.ಪಂ.ಮಾಜಿ ಅಧ್ಯಕ್ಷ ರಾಮಚಂದ್ರಪ್ಪ, ದೇವರಾಜ್, ಡಿಸಿ ಕೃಷ್ಣಪ್ಪ, ಮಂಜುನಾಥ್, ಅಶ್ವಥರೆಡ್ಡಿ, ಅನಿಲ್, ರಾಮು, ಗಿರಿ, ಮಾಜಿ ಗ್ರಾ.ಪಂ ಸದಸ್ಯ ನಾರಾಯಣಸ್ವಾಮಿ, ಪಿಳ್ಳಣ್ಣ, ಕೈವಾರ ಸುಬ್ಬಾರೆಡ್ಡಿ, ಬನಹಳ್ಳಿ ರವಿ, ಮಾಜಿ ನಗರಸಭಾ ಸದಸ್ಯ ಭಾಸ್ಕರ್, ಎಟಿಎಸ್ ಶ್ರೀನಿವಾಸ್, ಮಾಳಪಲ್ಲಿ ಶಿವಾರೆಡ್ಡಿ, ನಗರಸಭಾ ಸದಸ್ಯ ಮಂಜುನಾಥ್, ಸಂತೇಕಲ್ಲಹಳ್ಳಿ ಮಹೇಶ್, ಮೈಲಾಪುರ ದೇವರಾಜ್, ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಸಂತೇಕಲ್ಲಹಳ್ಳಿ ಪ್ರಭಾಕರ್, ತಾ. ಯುವಘಟಕದ ಅಧ್ಯಕ್ಷ ಶ್ರೀನಾಥ್, ಕಲ್ಲಹಳ್ಳಿ ಅನಿಲ್, ವೆಂಕಟೇಶ್ ಸೇರಿದಂತೆ ಗುನ್ನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.

 

- Advertisement -
 

 

For Daily Updates WhatsApp ‘HI’ to 7406303366

RELATED ARTICLES
- Advertisment -

Most Popular

Karnataka

India

You cannot copy content of this page