Bengaluru: ಮಕ್ಕಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಹಾಗೂ ವಿಜ್ಞಾನವನ್ನು ಅನ್ವೇಷಿಸಿ, ಅದರ ಅನುಭವ ಪಡೆದುಕೊಳ್ಳಲು ಐಟಿಸಿ ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿ (ITC Sunfeast Dark Fantasy) ಅವರಿಂದ ಈ ವಿನೂತನ ಸೈನ್ಸ್‌ಬಸ್‌ನನ್ನು (Science Bus) ಅನಾವರಣಗೊಳಿಸಲಾಗಿದೆ.
ISRO ಮಾಜಿ ಅಧ್ಯಕ್ಷ ಪ್ರಕಾಶ್ ರಾವ್, (Prakash Rao) ಬಾಲಿವುಡ್ ನಟಿ ಮಂದಿರಾ ಬೇಡಿ, (Mandira Bedi) ನಿಮ್ಹಾನ್ಸ್ನ ಡಿಎಂ ಡಾ. ಮೇಘಾ ಮಹಾಜನ್ (DM Dr. Megha Mahajan) ಐಟಿಸಿ ಲಿಮಿಟೆಡ್ (ITC Limited) ಬಿಸ್ಕೆಟ್ಸ್ ಮತ್ತು ಕೇಕ್ಸ್ ಕ್ಲಸ್ಟರ್, ಫುಡ್ಸ್ ಡಿವಿಷನ್ ಸಿಒಒ ಅಲಿ ಹ್ಯಾರಿಸ್ ಶೇರ್ ಬಸ್ ಅನ್ನು ಅನಾವರಣಗೊಳಿಸಿದರು.
ಐಟಿಸಿ ಲಿಮಿಟೆಡ್ (ITC Limited) ಬಿಸ್ಕೆಟ್ಸ್ ಮತ್ತು ಕೇಕ್ಸ್ ಕ್ಲಸ್ಟರ್, (Biscuits and Cakes Cluster) ಫುಡ್ಸ್ ಡಿವಿಷನ್ COO ಅಲಿ ಹ್ಯಾರಿಸ್ ಶೇರ್ ಮಾತನಾಡಿ, ಈಗಿನ ಮಕ್ಕಳು ಸಾಕಷ್ಟು ಫ್ಯಾಂಟಸಿ ಆಲೋಚನೆಗಳನ್ನು ಹೊಂದಿರುತ್ತಾರೆ.
ಅವರ ಆಲೋಚನೆಗಳಿಗೆ ತಕ್ಕಂತೆ ಐಟಿಸಿ ತಂಡ ಈ ವಿನೂತನ ಹಾಗೂ ಅತ್ಯಾಧುನಿಕ ತಂತ್ರಜ್ಞಾನದಿಂದ ಸೈನ್ಸ್ ಬಸ್ನನ್ನು (Science Bus) ತಯಾರಿಸಿದೆ. ಇದರಿಂದ ಮಕ್ಕಳ ಫ್ಯಾಂಟಸಿ (Fantasy) ಮತ್ತು ಕಲ್ಪನಾಶೀಲತೆಯನ್ನು ಪ್ರದರ್ಶಿಸಬಹುದಾಗಿದೆ.
Fantasy Science Bus ಬಸ್ ನ ವಿಶೇಷತೆ
ಈ ಬಸ್ ನಲ್ಲಿ ಅಳವಡಿಸಿರುವ ತಂತ್ರಜ್ಞಾನದಲ್ಲಿ ಮಕ್ಕಳು ತಮಗೆ ಇಷ್ಟವಾದ ಚಿತ್ರ, ಕಾರ್ಟೂನ್ (cartoon) ಅಥವಾ ಯಾವುದೇ ಕಲೆಯನ್ನು ಇಲ್ಲಿ ತಮ್ಮ ಕೈಯಿಂದ ಬಿಡಿಸಿದರೆ ಅದು 3ಡಿ ಸಂವಾದಾತ್ಮಕ ಅಕ್ಷರಗಳಾಗಿ ಪರಿವರ್ತನೆಗೊಂಡು ಡಿಜಿಟಲ್ ರಚನೆಯಾಗಿ ಪರದೆ ಮೇಲೆ ಪ್ರದರ್ಶನಗೊಳ್ಳಲಿದೆ.
ಇದು ಮಕ್ಕಳಿಗೆ ಮಾಯಾ ಲೋಕದ ಅನುಭವ ನೀಡುವ ಜೊತೆಗೆ ನಮ್ಮ ವಿಜ್ಞಾನದ ತಾಕತ್ತನ್ನು ತಿಳಿಸಲಿದೆ. ಈ ಮೂಲಕ ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುವ ಮೂಲ ಉದ್ದೇಶವನ್ನು ಒಳಗೊಂಡಿದೆ ಎಂದು ವಿವರಿಸಿದರು.
“ಫ್ಯಾಂಟಸಿ ಸ್ಪೇಸ್ಶಿಪ್” (fantasy spaceship) ಆಗಿರುವ ಈ ಬಸ್ ಹಲವು ವಿಶೇಷ ಹಾಗೂ ಕೌತುಕದಿಂದ ಕೂಡಿದೆ. ಈ ಬಸ್ನಲ್ಲಿ ವಿಸ್ತಾರವಾದ ಸಂವಾದಾತ್ಮಕ ಪರದೆ ಇದ್ದು, ಅತ್ಯಾಧುನಿಕ ತಂತ್ರಜ್ಞಾನದ ಸಂಯೋಜನೆಯಿಂದ ನಡೆಸಲ್ಪಡುತ್ತದೆ. ಈ ಬಸ್ನಲ್ಲಿ, ಮಕ್ಕಳ ತಮ್ಮ ಕೈಯಿಂದ ಬಿಡಿಸದ ಚಿತ್ರ ಅಥವಾ ಪಾತ್ರವು ರೋಮಾಂಚಕ ಡಿಜಿಟಲ್ ರಚನೆಗಳಾಗಿ ಪರಿವರ್ತನೆಗೊಳ್ಳಲಿದೆ.
ಮಕ್ಕಳು ಪೇಪರ್ ಮೇಲೆ ಬರೆದ ಈ ಕಲಾಕೃತಿಯನ್ನು ಸ್ಕ್ಯಾನ್ ಮಾಡಿದ ನಂತರ, ಅವರ ಕ್ಯಾರೆಕ್ಟರ್ಗಳು ಅಥವಾ ಕಲಾಕೃತಿಗಳು ಸ್ಪೇಸ್ಶಿಪ್ನಲ್ಲಿ ಡಿಜಿಟಲ್ ಆಗಿ ರೂಪದಲ್ಲಿ 3D ಸಂವಾದಾತ್ಮಕ ಅಕ್ಷರಗಳಾಗಿ ಪ್ರದರ್ಶನಗೊಳ್ಳಲಿದೆ.
ಈ ಸ್ಕ್ರೀನ್ನಲ್ಲಿ ಮೂಡಿಬರುವ ಕಲಾಕೃತಿಗಳನ್ನು ಮಕ್ಕಳು ತಮ್ಮ ಕೈಯ್ಯಾರೆ ಮುಟ್ಟುವ ಮೂಲಕ ತಾವೇ ಸ್ಪೇಸ್ಶಿಪ್ನಲ್ಲಿ ಓಡಾಡುತ್ತಿರುವ ಅನುಭವ ಪಡೆಯಬಹುದು. ಆಕಾಶಯಾನ ಮಾಡುವುದು ಪ್ರತಿಯೊಬ್ಬರ ಕನಸು. ಅದರಲ್ಲೂ ಮಕ್ಕಳಿಗೆ ಆಕಾಶಯಾನದ ಬಗ್ಗೆ ಹೆಚ್ಚೆಚ್ಚು ಕಲ್ಪನೆಗಳಿರುತ್ತವೆ.
ಈ ಬಸ್ನಲ್ಲಿ ಮಕ್ಕಳನ್ನು 3 ಡಿ ಎಫೆಕ್ಟ್ ಮೂಲಕ ಆಕಾಶಯಾನದ ನೈಜ ಅನುಭವವನ್ನು ಪಡೆದುಕೊಳ್ಳಬಹುದು.