Gauribidanur : ಗೌರಿಬಿದನೂರು ತಾಲ್ಲೂಕಿನ ಅಲಕಾಪುರದಲ್ಲಿ (Alakapura) ಸೋಮವಾರದಂದು ಶ್ರೀ ಚನ್ನಸೋಮೇಶ್ವರ ಸ್ವಾಮಿ ದೇವಾಲಯದ (Sri Channasomeshwara Swamy Temple) ಆವರಣದಲ್ಲಿ ಶ್ರದ್ಧಾಭಕ್ತಿಯಿಂದ ರಥೋತ್ಸವ (Rathotsava) ನಡೆಯಿತು. ರಥೋತ್ಸವಕ್ಕೆ ತಹಶೀಲ್ದಾರ್ ಎಚ್. ಶ್ರೀನಿವಾಸ್ ಚಾಲನೆ ನೀಡಿದರು. ಬೆಳಿಗ್ಗೆಯಿಂದಲೇ ಧಾರ್ಮಿಕ ವಿಧಿವಿಧಾನಗಳ ಜತೆಗೆ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಭಾನುವಾರ ಮಹಿಳೆಯರು ತಂಬಿಟ್ಟಿನ ಆರತಿ ತಂದು ಪೂಜಿಸಿದರು.
ಸರ್ಕಾರದ ಆದೇಶದನ್ವಯ ತಾಲ್ಲೂಕು ಆಡಳಿತ ಹಾಗೂ ದೇವಾಲಯದ ಆಡಳಿತ Covid-19 ಮಂಡಳಿಯು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿತ್ತು. ದೇವಾಲಯಕ್ಕೆ ಬರುವ ಭಕ್ತಾದಿಗಳು ನಡುವಿನ ಅಂತರ ಪಾಲಿಸಿ, ಮುಖಕ್ಕೆ ಮಾಸ್ಕ್ ಧರಿಸಿ ದೇವರ ದರ್ಶನ ಪಡೆಯುವಂತೆ ತಿಳಿಸಿದ್ದರು. ಕರೋನ ಹಿನ್ನೆಲೆ ಈ ಬಾರಿ ದೇವಾಲಯದ ಆವರಣದಲ್ಲಿ ಯಾವುದೇ ಅಂಗಡಿ ಮುಗ್ಗಟ್ಟುಗಳನ್ನು ತೆರೆಯಲು ಮತ್ತು ಅನ್ನ ಸಂತರ್ಪಣ ಮಾಡಲು ಅವಕಾಶ ನೀಡಿರಲಿಲ್ಲ.