Home News Mobile app ಮೂಲಕ ಹೆಲ್ತ್ ಮಾನಿಟರಿಂಗ್ service

Mobile app ಮೂಲಕ ಹೆಲ್ತ್ ಮಾನಿಟರಿಂಗ್ service

Mobile App Health Monitoring

ಈಗ ಹೊಸ ಹೊಸ ತಂತ್ರಜ್ಞಾನಗಳು (new technologies) ಎಲ್ಲ ಕ್ಷೇತ್ರಕ್ಕೂ ಲಗ್ಗೆ ಇಡುತ್ತಿವೆ. ದಿನವೆಲ್ಲ ಮಾಡಬಹುದಾದ ಕೆಲಸಗಳನ್ನು ಈಗ ಒಂದು ನಿಮಿಷದಲ್ಲೂ ಮಾಡುವ ಹೊಸ ಆವಿಷ್ಕಾರಗಳು ಹಲವು ಕ್ಷೇತ್ರಗಳಲ್ಲಿ ಆಗಿದೆ.

ಈಗ ಆರೋಗ್ಯ ಕ್ಷೇತ್ರದಲ್ಲಿಯೂ ಆಧರಿತ ರಿಮೋಟ್ ಪೇರೆಂಟ್ ಹೆಲ್ತ್ ಮಾನಿಟರಿಂಗ್ ಸೇವೆಯೂ (remote parent health monitoring service) ಆರಂಭವಾಗಿದೆ. ಅದನ್ನು ಆರಂಭಿಸಿರುವುದು ಡೋಝೀ (Dozee) ಸಂಸ್ಥೆ.

ಭಾರತದ ಆರೋಗ್ಯ ಕ್ಷೇತ್ರದ ಎಐ ನಾಯಕರಾಗಿರುವ ಡೋಝೀ ಸಂಸ್ಥೆಯು ಅನಿವಾಯಿ ಭಾರತೀಯರನ್ನು ಗಮನದಲ್ಲಿ ಇಟ್ಟುಕೊಂಡು ಕ್ಲಿನಿಕಲ್ ಗ್ರೇಡ್ ನ AI ಆಧರಿತ ರಿಮೋಟ್ ಪೇರೆಂಟ್ ಮಾನಿಟರಿಂಗ್ (RPM) ಸೇವೆಯಾದ ಡೋಝೀ ಶ್ರವಣ್ ಅನ್ನು ಆರಂಭಿಸಿದೆ. ಇದು ವಿದೇಶದಲ್ಲಿ ವಾಸಿಸುತ್ತಿರುವ ಮಕ್ಕಳು ಭಾರತದಲ್ಲಿರುವ ತಮ್ಮ ಪೋಷಕರ ಆರೋಗ್ಯದ ಮೇಲೆ ನಿಗಾ ಇಡುವ ಆಧುನಿಕ ವ್ಯವಸ್ಥೆಯಾಗಿದೆ.

ಡೋಝೀ ಶ್ರವಣ್ ಈಗ ವಿದೇಶದಲ್ಲಿರುವ ಕುಟುಂಬಗಳಿಗೆ ಭಾರತದಲ್ಲಿರುವ ತಮ್ಮ ಪೋಷಕರ ಆರೋಗ್ಯವನ್ನು ರೆಗ್ಯುಲರ್ ಆಗಿ ಚೆಕ್ ಮಾಡಲು ಅನುವು ಮಾಡಿಕೊಡುತ್ತದೆ. ಡೋಝೀಯ ಎಐ ಚಾಲಿತ, ಸಂಪರ್ಕರಹಿತ ರಿಮೋಟ್ ಹೆಲ್ತ್ ಮಾನಿಟರಿಂಗ್ ತಂತ್ರಜ್ಞಾನವನ್ನು ವೃದ್ಧರು ಸುಲಭವಾಗಿ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ.

ನಿರಂತರವಾಗಿ ನೈಜ ಸಮಯದ ಡೇಟಾ ಮಾನಿಟರಿಂಗ್ ಮಾಡುವಿಕೆ ಮತ್ತು ಸಮಸ್ಯೆ ಕುರಿತು ಎಚ್ಚರಿಕೆ ನೀಡುವ ವ್ಯವಸ್ಥೆಯು ಸದ್ಯದ ತುರ್ತಾಗಿತ್ತು.

ಇವೆಲ್ಲವೂ ದೂರದಲ್ಲಿದ್ದುಕೊಂಡೇ ದತ್ತಾಂಶ ಸುರಕ್ಷತೆ ಮತ್ತು ಗೌಪ್ಯತೆಯ ಅಂತರರಾಷ್ಟ್ರೀಯ ಮಾನದಂಡಗಳಿಗೆ ಬದ್ಧವಾಗಿ ತಮ್ಮ ಪ್ರೀತಿಪಾತ್ರರನ್ನು ನೋಡಿಕೊಳ್ಳಲು ಕುಟುಂಬಸ್ಥರಿಗೆ ನೆರವಾಗುವ ಸಮಗ್ರವಾದ, ಪ್ರಾಯೋಗಿಕವಾಗಿ ಸಾಬೀತಾಗಿರುವ, ನೈಜ ಸಮಯದ, ನಿಖರವಾದ, ವಿಶ್ವಾಸಾರ್ಹ ಮತ್ತು ಬಳಕೆದಾರ ಸ್ನೇಹಿ ನಿಗಾವಹಿಸುವಿಕೆ ಸೌಲಭ್ಯವನ್ನು ಒದಗಿಸುವ ತುರ್ತು ಅಗತ್ಯವನ್ನು ಸಾರುತ್ತದೆ.

ಈ ಕುರಿತು ಮಾತನಾಡುವ ಡೋಝೀಯ ಸಿಇಓ ಮತ್ತು ಸಹ ಸಂಸ್ಥಾಪಕ ಮುದಿತ್ ದಂಡವತೆ ಅವರು, “ಭಾರತೀಯ ಸಂಸ್ಕೃತಿಯಲ್ಲಿ ಅಡಕಗೊಂಡಿರುವ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುವ ಸಾರವನ್ನು ಶ್ರವಣ್ ಪ್ರತಿನಿಧಿಸುತ್ತದೆ.

ನಮ್ಮ ಹೆತ್ತವರನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂಬುದನ್ನು ಸಮಾಜ ತಿಳಿಸಿಕೊಟ್ಟಿದೆ. ಅನಿವಾಸಿ ಭಾರತೀಯರು ಜಾಗತಿಕ ಮಟ್ಟದಲ್ಲಿ ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡುತ್ತಿದ್ದರೂ, ಅವರಿಗೆ ಅವರ ಪೋಷಕರ ಆರೋಗ್ಯವನ್ನು ದೂರದಿಂದಲೇ ನೋಡಿಕೊಳ್ಳುವುದು ನಿಜಕ್ಕೂ ದೊಡ್ಡ ಸವಾಲಾಗಿದೆ.

ಅನಿವಾಸಿ ಭಾರತೀಯರು ಈಗ ಡೋಝೀ ಶ್ರವಣ್ ಮೂಲಕ ಭಾರತದಲ್ಲಿರುವ ತಮ್ಮ ಪೋಷಕರ ಆರೋಗ್ಯದ ಮೇಲೆ ಸುಲಭವಾಗಿ ನಿಗಾ ಇಡಬಹುದು ಮತ್ತು ಅವರ ಆರೋಗ್ಯ ನೋಡಿಕೊಳ್ಳಬಹುದು ಎಂದು ತಿಳಿದು ನೆಮ್ಮದಿ ಮತ್ತು ಶಾಂತಿ ಹೊಂದಬಹುದಾಗಿದೆ” ಎಂದು ಹೇಳಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version