Kalburgi : ಸರ್ಕಾರದ ಆದೇಶದಂತೆ ರಘೋಜಿ ಪದವಿಪೂರ್ವ ಕಾಲೇಜು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ಕಲಬುರಗಿ ನಗರದ ಹುಮನಾಬಾದ್ ರಿಂಗ್ ರಸ್ತೆಯಲ್ಲಿರುವ ದಾಮೋದರ ರಘೋಜಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ (Sri Damodar Raghoji Memorial Pre-University College, Kalburgi) Covid-19 ಲಸಿಕೆ (Vaccination) ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕಾಲೇಜಿನ ಒಟ್ಟು 246 ವಿದ್ಯಾರ್ಥಿಗಳಲ್ಲಿ 236 ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಮೊದಲ ದಿನವೇ ಲಸಿಕೆ ಪಡೆದುಕೊಂಡರು.