Kolar : ದಿವಂಗತ ನಟ ಪುನೀತ್ ರಾಜ್‌ಕುಮಾರ್‌ರ (Puneeth Rajkumar) ನೆನಪಿನಲ್ಲಿ ತಾಲ್ಲೂಕಿನ ತಂಬಿಹಳ್ಳಿಯಲ್ಲಿ ಆಯೋಜಿಸಿದ ತಂಬಿಹಳ್ಳಿ ಪ್ರೀಮಿಯರ್ ಲೀಗ್ (Tambihalli Premiere League – TPL) ಸೀಸನ್-2 ರ ಕ್ರಿಕೆಟ್ ಟೂರ್ನಿಯ ಫೈನಲ್ (Cricket Tournment) ಪಂದ್ಯದಲ್ಲಿ 99 ರನ್‌ಗಳಿಂದ 11 ಸ್ಟಾರ್ ಕ್ರಿಕೇಟರ್ಸ್ ತಂಡ, ಪಾಲಾರ್ ಕ್ರಿಕೇಟರ್ಸ್ ವಿರುದ್ಧ ಜಯಗಳಿಸಿದೆ.
ಪಾಲಾರ್ ಕ್ರಿಕೇಟರ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದರು. ಮೊದಲು ಬ್ಯಾಟಿಂಗ್ ಮಾಡಿದ 11 ಸ್ಟಾರ್ ಕ್ರಿಕೇಟರ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. 188 ರನ್ ಬೆನ್ನಟ್ಟಿದ ಪಾಲಾರ್ ಕ್ರಿಕೇಟರ್ಸ್ ತಂಡ 88 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲು ಕಂಡಿತು. ಟೂರ್ನಿಯಲ್ಲಿ ಸೈಲೆಂಟ್ ಕಿಲ್ಲರ್ಸ್ ತಂಡ 3ನೇ ಸ್ಥಾನ ಪಡೆಯಿತು.
ಮ್ಯಾನ್ ಆಫ್ ದಿ ಸಿರೀಸ್ ಪ್ರಶಸ್ತಿಯನ್ನು ಅಫ್ಸರ್, ಟಿ.ಸಿ.ಸುನಿಲ್ ಬೆಸ್ಟ್ ಬೌಲರ್, ಅಶ್ವತ್ಥ್ ಬೆಸ್ಟ್ ಬ್ಯಾಟ್ಸ್‌ಮನ್, ಸೋಮು ಬೆಸ್ಟ್ ವಿಕೆಟ್ ಕೀಪರ್, ಸುಬ್ರಮಣಿ ಉತ್ತಮ ನಾಯಕ ಪ್ರಶಸ್ತಿಯನ್ನು ಪಡೆದರು