Kudligi, Vijayanagara : ವಾರದ ಸಂತೆಗೆ ಕೂಡ್ಲಿಗಿ ಪಟ್ಟಣ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ಸಾವಿರಾರು ಜನರು ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಲು ಬರುತ್ತಾರೆ. ಆದರೆ Covid-19 3ನೇ ಅಲೆಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಮನಿಸಿದ ತಾಲ್ಲೂಕು ಆಡಳಿತ ಕರೋನ ಹಾರುಡುವಿಕೆಯನ್ನು ತಡೆಯಲು ಬುಧವಾರ ನಡೆಯುವ ಜಾನುವಾರ ಸಂತೆ ಹಾಗೂ ಶುಕ್ರವಾರ ನಡೆಯುವ ವಾರದ ಸಂತೆಯನ್ನು ರದ್ದುಗೊಳಿಸಿದ್ದರೂ ಶುಕ್ರವಾರ ಎಂದಿನಂತೆ ಸೇರಿದ ಜನರು ಅಂತರವನ್ನು ಮರೆತು ವ್ಯಾಪಾರದಲ್ಲಿ ತೊಡಗಿದ್ದರು.
ಸರ್ಕಾರ ಅದೇಶವನ್ನು ಮೀರಿ ಜನರು Covid-19 ಮಾರ್ಗಸೂಚಿ ಉಲ್ಲಂಘಿಸಿ ಲಕ್ಷ್ಮೀ ಬಜಾರದಲ್ಲಿ ಸಂಜೆ 5 ಗಂಟೆವರೆಗೂ ವ್ಯಾಪಾರ ನಡೆಸಿದರು.