Ayodhya, Uttar Pradesh : ರಾಮಮಂದಿರ (Ayodhya Ram Mandir) ನಿರ್ಮಾಣ ಆರಂಭವಾದಂದಿನಿಂದ ಪ್ರತಿದಿನ ಸರಾಸರಿ 4,000 ಜನರು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ, ಮುಂಬರುವ ವರ್ಷದಲ್ಲಿ ಈ ಸಂಖ್ಯೆ ದಿನಕ್ಕೆ 75,000 ಕ್ಕೆ ಏರುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಟ್ಟಣಕ್ಕೆ ಸಂಪರ್ಕವನ್ನು ಉನ್ನತೀಕರಿಸುವ ನಿಟ್ಟಿನಲ್ಲಿ March 2022 ರ ವೇಳೆಗೆ ರೂ 126 ಕೋಟಿ ವೆಚ್ಚದಲ್ಲಿ ಸರ್ಕಾರ, ರೈಲು ನಿಲ್ದಾಣಣವನ್ನು (Ayodhya Junction Railway Station Renovation) ನವೀಕರಿಸುವ ಗುರಿ ಹೊಂದಲಾಗಿದೆ.
ಮುಖ್ಯ ನಿಲ್ದಾಣದ ಪುನರ್ನಿರ್ಮಾಣದ ಜೊತೆಗೆ, ಎರಡು ಹೊಸ ಮೇಲ್ಸೇತುವೆಗಳು ಡಿಸೆಂಬರ್ 2022 ರೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದ್ದು, 14,640 ಚದರ ಮೀಟರ್ ಹೆಚ್ಚುವರಿ ಪ್ರವೇಶ ರಸ್ತೆಯನ್ನು ಮುಂದಿನ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳಿಸಿವ ಸಾಧ್ಯತೆಯಿದೆ.
ಹೊಸ ನಿಲ್ದಾಣದ ವಿನ್ಯಾಸವು ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದಿಂದ ಪ್ರೇರಿತವಾಗಿದೆ. ನಿಲ್ದಾಣವು ಕೇಂದ್ರ ಗುಮ್ಮಟ, ಕಂಬಗಳನ್ನೊಳಗೊಂಡಿದ್ದು, ದೇವಾಲಯಕ್ಕೆ ಬಳಸಲಾಗಿರುವ ಶಿಲೆಯನ್ನೇ ನಿಲ್ದಾಣಕ್ಕೂ ಬಳಸಲಾಗುತ್ತಿದೆ.
ರೈಲು ನಿಲ್ದಾಣವನ್ನು ಮಾತ್ರವಲ್ಲದೆ ಶೀಘ್ರದಲ್ಲಿಯೇ ಅಯೋಧ್ಯೆಗೆ ವಿಮಾನ ನಿಲ್ದಾಣವನ್ನು ಕಲ್ಪಿಸುವ ಪ್ರಕ್ರಿಯೆ ಕೂಡ ಚಾಲ್ತಿಯಲ್ಲಿದೆ.
Image: Piyush Goyal