ಲಡಾಖ್‌ನ (Ladakh) ರಾತ್ರಿಯ ಆಕಾಶದಲ್ಲಿ ಇತ್ತೀಚೆಗೆ ಭವ್ಯವಾದ ಕೆಂಪು ಅರೋರಾ (Red Aurora) ಕಾಣಿಸಿಕೊಂಡಿದೆ. ಭಾರತದಲ್ಲಿ ಇಂತಹ ಘಟನೆಗಳು ತೀರಾ ಅಪರೂಪವಾಗಿದ್ದು, ಇದೊಂದು ಗಮನಾರ್ಹ ಘಟನೆಯಾಗಿದೆ.
ಅರೋರಾ: ಪ್ರಕೃತಿಯ ಬೆಳಕಿನ ಹಬ್ಬ
ಅರೋರಾಗಳು ಭೂಮಿಯ ಧ್ರುವಗಳ ಬಳಿ ಹೆಚ್ಚಾಗಿ ಸಂಭವಿಸುವ ಭವ್ಯವಾದ ನೈಸರ್ಗಿಕ ಬೆಳಕಿನ ಪ್ರದರ್ಶನಗಳಾಗಿದ್ದು ಸೂರ್ಯನ ಕಣಗಳು ನಮ್ಮ ಗ್ರಹದ magnetic field ದೊಂದಿಗೆ ಘರ್ಷಿಸಿದಾಗ ಅವು ಕಾಣಿಸಿಕೊಳ್ಳುತ್ತವೆ. ಈ ಘರ್ಷಣೆಯು ವರ್ಣರಂಜಿತ ಬೆಳಕಿನ ಮಾದರಿಗಳನ್ನು ಉತ್ಪಾದಿಸಿ ಅದ್ಭುತ ಚಮತ್ಕಾರವನ್ನು ಸೃಷ್ಟಿಸುತ್ತದೆ.
ಹಾನ್ಲೆ (Hanle) ಮತ್ತು ಮೆರಾಕ್ (Merak) ನಿಂದ ಅರೋರಾ ಸೆರೆ
ಹಾನ್ಲೆ ವೀಕ್ಷಣಾಲಯವು ಆಕಾಶದ ಉತ್ತರ ಭಾಗದಲ್ಲಿ ಗೋಚರಿಸುವ ಅರೋರಾದ ಚಿತ್ರಗಳನ್ನು ಯಶಸ್ವಿಯಾಗಿ ಸೆರೆಹಿಡಿಯಿತು. ಪ್ಯಾಂಗೊಂಗ್ ತ್ಸೋ ಬಳಿ ನೆಲೆಗೊಂಡಿರುವ ಮೆರಾಕ್ ವೀಕ್ಷಣಾಲಯವು, ಸುತ್ತಲಿರುವ ಪರ್ವತಗಳು ವೀಕ್ಷಣೆಯನ್ನು ತಡೆಯುವುದರಿಂದ ಈ ದೃಶ್ಯಾವಳಿಯನ್ನು ಸೆರೆ ಹಿಡಿಯುವುದು ಕಷ್ಟಕರವಾಗಿತ್ತು.
ಹಾನ್ಲೆಯಲ್ಲಿನ ಅರೋರಾ ಘಟನೆಗಳು
ಇಂತಹ ವಿದ್ಯಮಾನಕ್ಕೆ ಹಾನ್ಲೆ ವೀಕ್ಷಣಾಲಯ ಸಾಕ್ಷಿಯಾಗಿರುವುದು ಇದೇ ಮೊದಲಲ್ಲ; ಈ ವರ್ಷದ ಆರಂಭದಲ್ಲಿ ಏಪ್ರಿಲ್ 23 ರಂದು ಅರೋರಾವನ್ನು ವೇಕ್ಷಣಾಲಯ ದಾಖಲಿಸಿದೆ. ಭಾರತದಂತಹ ಸಮಭಾಜಕ ಪ್ರದೇಶಗಳಲ್ಲಿ ಅಪರೂಪವಾಗಿರುವ ಈ ಸಮ್ಮೋಹನಗೊಳಿಸುವ ಬೆಳಕಿನ ಪ್ರದರ್ಶನಗಳು ಸಾಮಾನ್ಯವಾಗಿ ಧ್ರುವ ಪ್ರದೇಶಗಳಲ್ಲಿ ಗೋಚರಿಸುತ್ತವೆ. ಆದಾಗ್ಯೂ, ಬಲವಾದ ಸೌರ ಚಟುವಟಿಕೆಯ ಸಮಯದಲ್ಲಿ, ಅವುಗಳನ್ನು ಕೆಲವೊಮ್ಮೆ ಧ್ರುವಗಳಿಂದ ದೂರದಲ್ಲಿ ಕಾಣಬಹುದು.
ಹೆಚ್ಚಿನ ಅರೋರಾ ಚಟುವಟಿಕೆಯ ನಿರಕ್ಷೆ
ಮುಂದಿನ ಕೆಲವು ವರ್ಷಗಳಲ್ಲಿ ಹೆಚ್ಚು ಅರೋರಾ ಘಟನಾವಳಿಗಳ ಸಂಭವವನ್ನು ವಿಜ್ಞಾನಿಗಳು ಊಹಿಸಿದ್ದಾರೆ. ಈ ಏರಿಕೆಯು 11-ವರ್ಷದ ಸೌರ ಚಕ್ರದ ಕಾರಣವಾಗಿದ್ದು, ನಾವು ಪ್ರಸ್ತುತ ಆರೋಹಣ ಹಂತದಲ್ಲಿರುತ್ತೇವೆ, 2025 ರಲ್ಲಿ ನಾವು ಉತ್ತುಂಗವನ್ನು ತಲುಪುತ್ತಿದ್ದಂತೆ ಹೆಚ್ಚಿನ ಸೌರ ಜ್ವಾಲೆಗಳನ್ನು ನಿರೀಕ್ಷಿಸಲಾಗಿದೆ.
ಹಾನ್ಲೆ: ಭಾರತದ ಡಾರ್ಕ್ ಸ್ಕೈ ರಿಸರ್ವ್
ಹಾನ್ಲೆ ಭಾರತದ ಏಕೈಕ ಡಾರ್ಕ್ ಸ್ಕೈ ರಿಸರ್ವ್ ಎಂದು ಗುರುಟಿಸಿಕೊಡಿದೆ. ಇಲ್ಲಿ, ಬೆಳಕಿನ ಮಾಲಿನ್ಯವನ್ನು ಕಡಿಮೆ ಮಾಡಲು ಪ್ರಯತ್ನಗಳನ್ನು ಮಾಡಲಾಗುತ್ತದೆ, ಇದು ಇಂತಹ ಗಮನಾರ್ಹವಾದ ನೈಸರ್ಗಿಕ ವಿದ್ಯಮಾನಗಳಿಗೆ ಸಾಕ್ಷಿಯಾಗಲು ಸೂಕ್ತವಾದ ಸನ್ನಿವೇಶವನ್ನು ಸೃಷ್ಟಿಸುತ್ತದೆ.
For Daily Updates WhatsApp ‘HI’ to 7406303366
The post ಲಡಾಖ್‌ನ ಆಕಾಶದಲ್ಲಿ ಅಪರೂಪದ ಕೆಂಪು Aurora appeared first on WeGnana – Kannada Science and Technology News Updates.