Mulbagal, Kolar : ಹೈಕೋರ್ಟ್ (High Court of Karnataka) ಆದೇಶದ ಅನ್ವಯ ಸೋಮವಾರ ರಾತ್ರಿ ಮುಳಬಾಗಿಲು ತಾಲ್ಲೂಕಿನ ದುಗ್ಗಸಂದ್ರ ಹೋಬಳಿಯ ನಾಚಗುಂಡ್ಲಹಳ್ಳಿಗೆ ಸೇರಿದ ಸರ್ವೆ ನಂ.58ರ ಗೋಮಾಳದ ಗುಡ್ಡದಮೇಲೆ ಅಕ್ರಮವಾಗಿ (Illegal) ನಿರ್ಮಿಸಿದ್ದ ಯೇಸು ಪ್ರತಿಮೆಯನ್ನು (Jesus Christ Statue) ತಹಶೀಲ್ದಾರ್ ಆರ್. ಶೋಭಿತಾ, DySP ಕೆ.ಸಿ.ಗಿರಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು.
ಗೋಕುಂಟೆ ಗ್ರಾಮದ ಕ್ರೈಸ್ತರು ಪ್ರತಿಮೆ ತೆರವುಗೊಳಿಸದಂತೆ ಮನವಿ ಮಾಡಿದರೂ ನ್ಯಾಯಾಲಯದ ಆದೇಶ ಪಾಲನೆ ಕುರಿತು ಅಧಿಕಾರಿಗಳು ಗ್ರಾಮಸ್ಥರಿಗೆ ಮನವರಿಕೆ ಮಾಡಿ ಪ್ರತಿಮೆಯನ್ನು ತೆರವುಗೊಳಿಸಿದರು. ಮಾಧ್ಯಮದವರಿಗೆ ಸ್ಥಳಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು.