Mysuru : ಮೈಸೂರು ಮಹಾನಗರ ಪಾಲಿಕೆ (Mysuru City Corporation) ವ್ಯಾಪ್ತಿಯಲ್ಲಿ ನೀರಿನ ಶುಲ್ಕ (Water Tax) ಹೆಚ್ಚಿಸಬಾರದು ಎಂದು ಪಾಲಿಕೆ ಆಯುಕ್ತರಿಗೆ ಸಂಸದ ಪ್ರತಾಪ ಸಿಂಹ (MP Pratap Simha) Letter ಮೂಲಕ ಮನವಿ ಮಾಡಿದ್ದಾರೆ.
‘ನೀರಿನ ದರ ಮತ್ತಷ್ಟು ಹೆಚ್ಚಿಸುವ ಚಿಂತನೆಯನ್ನು ಪಾಲಿಕೆ ನಡೆಸಿರುವುದು ನನ್ನ ಗಮನಕ್ಕೆ ಬಂದಿದ್ದು ಶುಲ್ಕ ಹೆಚ್ಚಿಸಿ ಬಳಕೆದಾರರಿಗೆ ಹೊರೆ ಉಂಟುಮಾಡುವ ಬದಲು, ಪ್ರತಿ ಮನೆಗೂ ನೀರು ಬಳಕೆಯ ಮೀಟರ್ ಅಳವಡಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಇದರಿಂದ ಪಾಲಿಕೆಯ ಆದಾಯ ಹೆಚ್ಚುತ್ತದೆ. 2021ರ ನವೆಂಬರ್‌ವರೆಗೆ ನೀರಿನ ಸಂಪರ್ಕಗಳ ಬಾಕಿ ಮೊತ್ತ ಅಂದಾಜು ₹219 ಕೋಟಿ ಉಳಿದಿರುತ್ತದೆ. ₹146.09 ಕೋಟಿ ನೀರಿನ ಶುಲ್ಕ ಮತ್ತು ₹73.60 ಕೋಟಿ ಬಡ್ಡಿ ಇದರಲ್ಲಿ ಸೇರಿದೆ. ಬಡ್ಡಿ ಮನ್ನಾ ಮಾಡಿ, ನೀರಿನ ಶುಲ್ಕ ಮಾತ್ರ ಪಾವತಿಸಿಕೊಳ್ಳಲು ನಿರ್ಣಯ ಕೈಗೊಳ್ಳಬೇಕು’ ಎಂದು ಪಾಲಿಕೆ ಸದಸ್ಯರಿಗೆ ಪತ್ರದಲ್ಲಿ ತಿಳಿಸಿದ್ದಾರೆ.