Bengaluru (Bangalore) : 2 ದಿನದ ಕರ್ನಾಟಕ ರಾಜ್ಯ ಪ್ರವಾಸ (Karnataka State Visit) ನಿಮಿತ್ತ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಇಂದು ಬೆಂಗಳೂರು ನಗರಕ್ಕೆ ಆಗಮಿಸಿದರು. ಮಧ್ಯಾಹ್ನ ಯಲಹಂಕದ ವಾಯು ನೆಲೆಗೆ IAF ನ ವಿಶೇಷ ವಿಮಾನದಲ್ಲಿ ಆಗಮಿಸಿದ ಪ್ರಧಾನಿಯವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಯವರು ಸ್ವಾಗತಿಸಿದರು.
ನಂತರ IISc ಆವರಣದಲ್ಲಿ ಆಯೋಜಿಸಿದ್ದ ಮಿದುಳು ಸಂಶೋಧನಾ ಕೇಂದ್ರ (Centre for Brain Research) ಉದ್ಘಾಟನೆ ಹಾಗೂ ಬಾಗ್ಚಿ- ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ (Bagchi-Parthasarathy Multispeciality Hospital) ಗಾಗಿ ಶಿಲಾನ್ಯಾಸವನ್ನು CM ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot), ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ (Pralhad Joshi) ಜತೆ ಪ್ರಧಾನಿ ನೆರವೇರಿಸಿದರು.
ಬಳಿಕ ಬೆಂಗಳೂರಿನ ಕೊಮ್ಮಘಟ್ಟದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಗೆ ಶಂಕುಸ್ಥಾಪನೆ ಮಾಡಿ ಸಂಪೂರ್ಣ ವಿದ್ಯುದೀಕರಣಗೊಂಡಿರುವ ಕೊಂಕಣ ರೈಲು ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
ಈ ವೇಳೆ ಕನ್ನಡದಲ್ಲೇ ಭಾಷಣವನ್ನು ಆರಂಭಿಸಿದ ಪ್ರಧಾನಿಗಳು “ರಾಜ್ಯದಲ್ಲಿ ಹಲವು ಮೂಲಭೂತ ಸೌಲಭ್ಯಗಳು ಕಲ್ಪಿಸುವ ಯೋಜನೆಗಳಿಗೆ ಇಂದು ಚಾಲನೆ ಸಿಕ್ಕಿದ್ದು ಕರ್ನಾಟಕ ರಾಜ್ಯದ ಪಾಲಿಗೆ ಇಂದು ಮಹತ್ವದ ದಿನವಾಗಿದೆ. ಯೋಜನೆಗಳನ್ನು ಜಾರಿಗೊಳಿಸಲು ನನಗೆ ಸಂತೋಷವಾಗುತ್ತದೆ. 27 ಸಾವಿರ ಕೋಟಿರೂ ಮೌಲ್ಯದ ಅಭಿವೃದ್ಧಿ ಕಾರ್ಯವನ್ನು ಉದ್ಘಾಟಿಸಲಾಗಿದ್ದು ವಿಜ್ಞಾನ ತಂತ್ರಜ್ಞಾನದ ಕ್ಷೇತ್ರದಲ್ಲಿನ ಪ್ರಗತಿಯನ್ನು ನೋಡಲು ನನಗೆ ಸಂತಸವಾಗುತ್ತಿದೆ. ದೇಶದ ಲಕ್ಷಾಂತರ ಯುವಕರಿಗೆ ಭವಿಷ್ಯದ ಕನಸು ಕಲ್ಪಿಸುವ ನಗರ ನಮ್ಮ ಬೆಂಗಳೂರು. ಬೆಂಗಳೂರಿನ ಟ್ರಾಫಿಕ್ ಜಾಮ್ (Traffic Jam) ನಿಂದ ಮುಕ್ತಿ ಪಡೆಯಲು ಮೆಟ್ರೊ (Namma Metro), ಸಬ್ ಅರ್ಬನ್ ರೈಲು, ಉತ್ತಮ ರಸ್ತೆ ಎಲ್ಲವನ್ನೂ ಡಬಲ್ ಇಂಜಿನ್ ಸರ್ಕಾರ ಮಾಡುತ್ತದೆ” ಎಂದು ಹೇಳಿದರು.
16 ವರ್ಷಗಳಿಂದ ಫೈಲ್‌ನಲ್ಲೇ ಉಳಿದಿದ್ದ ಯೋಜನೆಗೆ ನಮ್ಮ ಸರ್ಕಾರ ಕಾಯಕಲ್ಪ ನೀಡಿದೆ. ವೆಲ್ತ್ ಕ್ರಿಯೇಟರ್ ಮತ್ತು ಜಾಬ್ ಕ್ರಿಯೇಟರ್‌ಗಳ ನಗರವಾಗಿರುವ ಬೆಂಗಳೂರಿನ ಎಲ್ಲಾ ರೈಲ್ವೇ ನಿಲ್ದಾಣಗಳನ್ನೂ ಸ್ಮಾರ್ಟ್ ನಿಲ್ದಾಣಗಳನ್ನಾಗಿ ಮಾಡಲಾಗುವುದು. 1,200 ಕಿಲೋಮೀಟರ್‌ನಷ್ಟು ಉದ್ದ ರೈಲ್ವೆ ಸಂಪರ್ಕ ಕರ್ನಾಟಕದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗಿದೆ. ವಿಮಾನದಲ್ಲಿ ಕೊಡುತ್ತಿದ್ದ ಸವಲತ್ತುಗಳನ್ನು ರೈಲ್ವೆಯಲ್ಲೂ ಕೊಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್, ಸಂಸದ ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದರು.