Pro Kabaddi 2021 – ಆವೃತ್ತಿ 8 ರ ಜನವರಿ 12, 2022 ರಂದು ಎರಡು ಮುಖಾಮುಖಿಗಳೊಂದಿಗೆ ಮುಂದುವರೆಯಿತು. ದಿನದ ಮೊದಲ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ (Haryana Steelers) ಮತ್ತು ಯುಪಿ ಯೋಧ (U.P. Yoddha) ನಡುವಿನ ಹೋರಾಟ ನಡೆಯಿತು. ಎರಡನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ K.C. (Dabang Delhi K.C.) ಮತ್ತು ಬೆಂಗಳೂರು ಬುಲ್ಸ್ (Bengaluru Bulls) ಮುಖಾಮುಖಿಯಾದರು.
ಪಂದ್ಯ 1: Haryana Steelers Vs U.P. Yoddha
ದಿನದ ಮೊದಲ ಪಂದ್ಯದಲ್ಲಿ 40 ನಿಮಿಷಗಳ ನಿಗದಿತ ಅವಧಿಯಲ್ಲಿ ಎರಡು ತಂಡಗಳು ತಲಾ 36 ಅಂಕಗಳನ್ನು ಗಳಿಸುವುದರೊಂದಿಗೆ ಹರಿಯಾಣ ಸ್ಟೀಲರ್ಸ್ (Haryana Steelers) ಮತ್ತು ಯುಪಿ ಯೋಧಾ (U.P. Yoddha) Tie ಮಾಡಿಕೊಂಡವು.
ಹರಿಯಾಣ ಸ್ಟೀಲರ್ಸ್ ಪರ ವಿಕಾಶ್ ಕಂಡೋಲ (Vikash Kandola) 17 ಅಂಕಗಳನ್ನು ಗಳಿಸಿದರು. ಮೀಟೂ (Meetu) 6 ಅಂಕಗಳನ್ನು ಪಡೆದರು.
ಯುಪಿ ಯೋಧಾ (U.P. Yoddha) ಪರ ಸುರೇಂದರ್ ಗಿಲ್ (Surender Gill) 14 ಅಂಕಗಳನ್ನು ಗಳಿಸಿದರೆ, ನಾಯಕ ನಿತೇಶ್ ಕುಮಾರ್ (Nitesh Kumar) 3 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದರು.
ಪಂದ್ಯ 2: Dabang Delhi K.C. Vs Bengaluru Bulls
ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ (Bengaluru Bulls) ವಿರುದ್ಧ 61-22 ಅಂಕಗಳಿಂದ ದಬಾಂಗ್ ಡೆಲ್ಲಿ K.C. (Dabang Delhi K.C.) ಸೋಲನ್ನು ಅನುಭವಿಸಿತು.
ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ ಸೆಹ್ರಾವತ್ (Pawan Sehrawat) 27 ಅಂಕಗಳ ಬೃಹತ್ ಮೊತ್ತದೊಂದಿಗೆ ಮುನ್ನಡೆಸಿದರು. ಚಂದ್ರನ್ ರಂಜಿತ್ (Chandran Ranjit) 5 ಅಂಕ ಗಳಿಸಿದರೆ, ಸೌರಭ್ ನಂದಲ್ (Saurabh Nandal) 4 ಅಂಕಗಳು ಹಾಗೂ ಭರತ್ (Bharat) 7 ಅಂಕಗಳನ್ನು ಗಳಿಸಿತು.
PKL 2021 – January 12, 2022 Score Card
PKL 2021 ರ January 12, 2022 ದಿನದ ಪಂದ್ಯಗಳ ನಂತರ ತಂಡಗಳ ಬಲಾಬಲಗಳು ಈ ರೀತಿ ಇವೆ
Image: Pro Kabaddi