Pro Kabaddi 2021 – ಆವೃತ್ತಿ 8 ರ ಜನವರಿ 13, 2022 ರಂದು ಎರಡು ಪಂದ್ಯಗಳು ನಡೆದವು. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ (Bengal Warriors), ತಮಿಳ್ ತಲೈವಾಸ್ (Tamil Thalaivas) ವಿರುದ್ಧ ಜಯ ಸಾಧಿಸಿತು. ಎರಡನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ (Puneri Paltan) ಸೀಸನ್ 2 ಚಾಂಪಿಯನ್ ಯು ಮುಂಬಾವನ್ನು (U Mumba) ಸೋಲಿಸಿತು.
ಪಂದ್ಯ 1: Bengal Warriors Vs Tamil Thalaivas
ದಿನದ ಮೊದಲ ಪಂದ್ಯದಲ್ಲಿ ಕಳೆದ ಋತುವಿನ ವಿಜೇತ ಬೆಂಗಾಲ್ ವಾರಿಯರ್ಸ್ (Bengal Warriors), ತಮಿಳ್ ತಲೈವಾಸ್ (Tamil Thalaivas) ಅನ್ನು ಒಂಬತ್ತು ಅಂಕಗಳ ಅಂತರದ 37-28 ಅಂಕಗಳಿಂದ ಸೋಲಿಸುವ ಮೂಲಕ ಗೆಲುವಿನ ಹಾದಿಗೆ ಮರಳಿದರು.
ಬೆಂಗಾಲ್ ವಾರಿಯರ್ಸ್ ಪರ ನಾಯಕ ಮಣಿಂದರ್ 12 ರೇಡ್ ಪಾಯಿಂಟ್‌ಗಳನ್ನು (8 ಟಚ್ ಪಾಯಿಂಟ್‌ಗಳು ಮತ್ತು 4 ಬೋನಸ್ ಪಾಯಿಂಟ್) ಪಡೆದರು. ಅಮಿತ್ ನಿರ್ವಾ 5 ಪಾಯಿಂಟ್‌ಗಳನ್ನು ಗಳಿಸಿದರು.
ತಮಿಳ್ ತಲೈವಾಸ್ ಪರ ಮಂಜೀತ್ 8 ರೇಡ್ ಪಾಯಿಂಟ್‌ಗಳನ್ನು ಗಳಿಸಿದರೆ, ನಾಯಕ ಪಿಒ ಸುರ್ಜೀತ್ ಸಿಂಗ್ 3 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದರು.
ಪಂದ್ಯ 2: U Mumba Vs Puneri Paltan
ದಿನದ ಎರಡನೇ ಪಂದ್ಯದಲ್ಲಿ ಸೀಸನ್ 2 ಚಾಂಪಿಯನ್ ಯು ಮುಂಬಾ (U Mumba), ಪುಣೇರಿ ಪಲ್ಟಾನ್ (Puneri Paltan) ಕೈಯಲ್ಲಿ PKL 8 ರ ಮೂರನೇ ಸೋಲನ್ನು (23-42) ಅನುಭವಿಸಿತು.
ಪುಣೇರಿ ಪಲ್ಟನ್ ಪರ ನಾಯಕ ನಿತಿನ್ ತೋಮರ್ 9 ಅಂಕಗಳನ್ನು ಗಳಿಸಿದರು. ಅಸ್ಲಾಮ್ ಇನಾಮದಾರ್ 7 ಅಂಕಗಳು, ವಿಶಾಲ್ ಭಾರದ್ವಾಜ್ High 5 ಅನ್ನು ಪಡೆದರು.
ಯು ಮುಂಬಾ ಪರ ರಾಹುಲ್ ಸೇತ್ಪಾಲ್ 5 ಅಂಕಗಳನ್ನು ಗಳಿಸಿದರು.
PKL 2021 – January 13, 2022 Score Card
PKL 2021 ರ January 13, 2022 ದಿನದ ಪಂದ್ಯಗಳ ನಂತರ ತಂಡಗಳ ಬಲಾಬಲಗಳು ಈ ರೀತಿ ಇವೆ
Image: Pro Kabaddi