Shirasangi , Belagavi District : ಶಿರಸಂಗಿ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ (Shirasangi Shankara Lingeshwara Temple) ಲಿಂಗರಾಜ ಜಯಂತಿ ಆಚರಣೆ ಮತ್ತು ಶಿರಸಂಗಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು (KMF) ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ (Anand Mamani) ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಆನಂದ ಮಾಮನಿ “ಹೈನುಗಾರಿಕೆ ಪ್ರೋತ್ಸಾಹಿಸಲು KMF ನಿಂದ ಹಲವು ಕಾರ್ಯಕ್ರಮಗಳ ಮೂಲಕ ರೈತರಿಗೆ ಹಾಗೂ ಹೈನುಗಾರರಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು ನಾವೆಲ್ಲರೂ ಬದ್ಧರಿದ್ದೇವೆ. ಹೈನೋದ್ಯಮ ಬೆಳೆದರೆ ಇಡೀ ರೈತನ ಬದುಕು ಹಸನಾಗುತ್ತದೆ. ರೈತರು ಸ್ವಾವಲಂಬಿ ಬದಕು ಕಟ್ಟಿಕೊಳ್ಳಲು ಹೈನುಗಾರಿಕೆ ಮಹತ್ವದ ಪಾತ್ರ ಗಳಿಸಿದೆ. ಅವಕಾಶ ಬಳಸಿಕೊಂಡು ಆರ್ಥಿಕವಾಗಿ ಸಭಲರಾಗಬೇಕು” ಎಂದು ತಿಳಿಸಿದರು.
ಮುಳ್ಳೂರಿನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೆಮುಲ್ ನಿರ್ದೇಶಕ ಎಸ್.ಎಸ್. ಮುಗಳಿ, ಜ್ಯೋತಿ ಅಣ್ಣಿಗೇರಿ, ಬೆಮುಲ್ ವ್ಯವಸ್ಥಾಪಕ ನಿರ್ದೇಶಕ ಪಿ. ಶ್ರೀನಿವಾಸನ್, ಡಾ.ವಿ.ಕೆ. ಜೋಶಿ, ಡಾ.ರಾಜಶೇಖರ ಜಂಬಗಿ, ಸಿಡಿಪಿಒ ಕಾಂಚನಾ ಅಮಟೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಆಶಾ ಮಹೇಶ, ತಾಲ್ಲೂಕು ಪಶು ವೈದ್ಯಾಧಿಕಾರಿ ಪ್ರಮೋದ ಮೂಡಲಗಿ, ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಹೋಸಮಠ, ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಪಂಚೇನವರ, ಜಗದೀಶ ಕೌಜಗೇರಿ, ಕೆ.ಬಿ. ಪಾಟೀಲ, ಬಸವಪ್ರಭು ಅಣ್ಣಿಗೇರಿ, ಫಕೀರಪ್ಪ ಓಗಳಾಪೂರ, ಗದಿಗಯ್ಯ ಮಠಪತಿ, ಫಕೀರಪ್ಪ ಬಡೆಮ್ಮನವರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.