Tuesday, October 4, 2022
HomeKarnatakaRamanagaraಸಿದ್ಧಗಂಗಾ ಶಿವಕುಮಾರ ಶ್ರೀಗಳ ಮೂರನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ

ಸಿದ್ಧಗಂಗಾ ಶಿವಕುಮಾರ ಶ್ರೀಗಳ ಮೂರನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ

Ramanagara : ರಾಮನಗರ ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಭಾನುವಾರ ರಾತ್ರಿ ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ (Sree Siddaganga Math Shivakumara Swami) ಮೂರನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಕುಡಿನೀರುಕಟ್ಟೆ ವಿರಕ್ತ ಮಠದ ಶಿವರುದ್ರ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕುಡಿನೀರುಕಟ್ಟೆ ವಿರಕ್ತ ಮಠದ ಶಿವರುದ್ರ ಸ್ವಾಮೀಜಿ ” ಶ್ರೀಗಳು ದೈಹಿಕವಾಗಿ ಅಗಲಿ ಮೂರು ವರ್ಷವಾದರೂ ಮಾನಸಿಕವಾಗಿ ನಮ್ಮೆಲ್ಲರ ಹೃದಯದಲ್ಲಿ ಇನ್ನು ಅಜರಾಮಾರವಾಗಿದ್ದಾರೆ. 111 ವರ್ಷಗಳ ಸಾರ್ಥಕ ಜೀವನ ನಡೆಸಿ ತ್ರಿವಿಧ ರೀತಿಯ ದಾಸೋಹ ನಡೆಸಿಕೊಟ್ಟ ಶಿವಕುಮಾರ ಶ್ರೀಗಳ ನಡೆ–ನುಡಿಯನ್ನು ನಾವೆಲ್ಲ ಅನುಯಾಯಿಗಳು ಕೊಂಚ ಮೈ ಗೂಡಿಸಿಕೊಂಡರೂ ಅದೇ ಸಾರ್ಥಕತೆ ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೇವೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಿವಕುಮಾರ ಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಯಿತು. ಕವಣಾಪುರದ ಬಸವಣ್ಣ ಪಾಲ್ಗೊಂಡಿದ್ದು ಈ ಬಾರಿಯ ವಿಶೇಷ. ಭಕ್ತರಿಗಾಗಿ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು.

ಮಹಾಲಿಂಗಯ್ಯ, ವಿಜಯಕುಮಾರ್, ಶಿವಲಿಂಗ ದೇವರು, ಶಿವಕುಮಾರ್, ರುದ್ರೇಶ್‌, ಅನಿಲ್, ಎಲ್.ಪಿ. ವೀರೇಶ್‌ ಸೇರಿದಂತೆ ನೂರಾರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

- Advertisment -

Most Popular

Karnataka

India

You cannot copy content of this page