Tiptur, Tumkur (Tumakuru) : ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಾಗೂ ಗ್ರಾಮ ಪಂಚಾಯಿತಿಯಿಂದ RIDF 22 ರ ಯೋಜನೆಯ ಅಡಿಯಲ್ಲಿ ಸುಮಾರು ₹9.17 ಲಕ್ಷ ಮೊತ್ತದ ಅನುದಾನದಲ್ಲಿ ತಿಪಟೂರು ನಗರಸಭಾ ವ್ಯಾಪ್ತಿಯ ತಮಿಳು ಕಾಲೋನಿ-ಬಿ, ಚಿಕ್ಕಲಕ್ಕಿಪಾಳ್ಯ ಹಾಗೂ ಈಚನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋಡಿಹಳ್ಳಿ ಕಾವಲು ಅಂಗನವಾಡಿ ಕೇಂದ್ರಗಳನ್ನು (Anganwadi Centres) ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Minister of Primary & Secondary Education B. C. Nagesh) ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು “ಅಂಗನವಾಡಿ ಕೇಂದ್ರಗಳ ಸೇವೆಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿ ಹಾಗೂ ತಾಯಂದಿರ ಪೌಷ್ಟಿಕತೆ ಸುಧಾರಣೆಗೆ ಸಹಾಯಕವಾಗಿದ್ದು ಸೇವೆಗಳನ್ನು ನೀಡಲು ಸುಸಜ್ಜಿತವಾದ ಸ್ವಂತ ಅಂಗನವಾಡಿ ಕಟ್ಟಡ ಅವಶ್ಯಕತೆಯಿದೆ. ಇದರಿಂದಾಗಿ ಮಕ್ಕಳು ಪೌಷ್ಟಿಕವಾಗಿ ಬೆಳೆಯುವ ಜೊತೆಗೆ ಉತ್ತಮ ಜ್ಞಾನವನ್ನು ಅಂಗನವಾಡಿ ಕೇಂದ್ರಗಳು ನೀಡುತ್ತವೆ” ಎಂದು ತಿಳಿಸಿದರು .
ನಗರಸಭೆಯ ಅಧ್ಯಕ್ಷ ಪಿ.ಜೆ.ರಾಮಮೋಹನ್, ನಗರಸಭೆಯ ಉಪಾಧ್ಯಕ್ಷ ಸೊಪ್ಪು ಗಣೇಶ್, ಸದಸ್ಯರಾದ ಲತಾ ಲೋಕೇಶ್, ಮೋಹನ್ ರಾಜ್, ಜಯರಾಂ, ಮಾಜಿ ಸದಸ್ಯ ಲೋಕೇಶ್, ಈಚನೂರು ಗ್ರಾ.ಪಂ.ಅಧ್ಯಕ್ಷೆ ಶೋಭಾ.ಎಸ್., ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪಿ.ಓಂಕಾರಪ್ಪ, ಇಂಜಿನಿಯರ್ ಸಿದ್ದೇಶ್ ಉಪಸ್ಥಿತರಿದ್ದರು.