Vijayapura : ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ರಾಷ್ಟ್ರೀಯ ಶಿಕ್ಷಣ ನೀತಿ(NEP) ಹೇರಿಕೆ ವಿರೋಧಿಸಿ ಬುಧವಾರ AIDSO ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರ ಅತ್ಯಂತ ತರಾತುರಿಯಲ್ಲಿ ರಾಜ್ಯದ ಶಿಕ್ಷಣ ತಜ್ಞರು, ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ವ್ಯಾಪಕ ವಿರೋಧದ ನಡುವೆಯೂ ಎನ್‍ಇಪಿ ಜಾರಿಗೊಳಿಸಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕ ತರಲಿದ್ದು, 4 ವರ್ಷದ ಪದವಿ ಕೋರ್ಸಿನಲ್ಲಿ ಉಂಟಾಗಿರುವ ಗೊಂದಲಗಳು ಇದಕ್ಕೆ ಪುರಾವೆಯಾಗಿದೆ. ಈಗಾಗಲೇ ಪ್ರಥಮ ಪದವಿ ಕೋರ್ಸ್ ತರಗತಿಗಳು ಆರಂಭವಾಗಿ, ಇನ್ನೇನು ಒಂದೆರಡು ವಾರಗಳಲ್ಲಿ ಮೊದಲ ಆಂತರಿಕ ಪರೀಕ್ಷೆಗಳು ನಡೆಯುವ ಹಂತದಲ್ಲಿದ್ದರೂ ವಿದ್ಯಾರ್ಥಿಗಳಿಗೆ ಪಠ್ಯಪಸ್ತಕಗಳೇ ಸಿಕ್ಕಿಲ್ಲ. ಈ ನಡುವೆ ಬೋಧಕರ ಕೊರತೆಯಿಂದಾಗಿ ತರಗತಿ ಸಮಯ ಆರಂಭವಾದರೂ ಯಾವ ವಿಭಾಗದಲ್ಲೂ ಸಮಗ್ರ ರೀತಿಯ ಅಧ್ಯಯನಗಳು ನಡೆದಿಲ್ಲ ಎಂದು ಎಐಡಿಎಸ್‍ಓ ಸಂಘಟನೆಯ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯರಾದ ಅಭಯಾ ದಿವಾಕರ್ ದೂರಿದರು.
ಎಐಡಿಎಸ್‍ಓ ಜಿಲ್ಲಾ ಘಟಕದ ಅಧ್ಯಕ್ಷೆ ಸುರೇಖಾ ಕಡಪಟ್ಟಿ, ವಿದ್ಯಾರ್ಥಿ ಮುಖಂಡರಾದ ಕಾವೇರಿ ರಜಪೂತ, ಸುಸ್ಮಿತಾ, ಅಕ್ಷತಾ, ಮೊಹಮದ್, ಪೊಜಾ ಸ್ಡಾತಿ, ಭಾಗ್ಯಶ್ರೀ, ತೌಫೀಕ್, ಅನ್ವರ್, ರಾಜು, ಗಣೇಶ, ರಫೀಕ್, ಫರ್ಹಾನ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.