New Delhi, India : Covid-19 ಲಸಿಕೆಗಳ ‘ಮುನ್ನೆಚ್ಚರಿಕೆ ಡೋಸ್’ (Booster / Precautionary Dose) ಪಡೆಯಲು ಅರ್ಹರಾಗಿರುವವರು ಶನಿವಾರ ಸಂಜೆಯಿಂದ Online Appointment ಅನ್ನು ಕಾಯ್ದಿರಿಸಬಹುದು. ಆದಾಗ್ಯೂ, ಫಲಾನುಭವಿಗಳು ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
“ಎರಡು ಡೋಸ್ ಕೋವಿಡ್ -19 ಲಸಿಕೆ ತೆಗೆದುಕೊಂಡವರು ನೇರವಾಗಿ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬಹುದು ಅಥವಾ ಯಾವುದೇ ಕೋವಿಡ್ -19 ಲಸಿಕೆ ಕೇಂದ್ರಕ್ಕೆ ಹೋಗಬಹುದು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು TOI ವರದಿ ಮಾಡಿದೆ. ಕೋವಿಡ್ ಲಸಿಕೆಗಳ Precautionary ಡೋಸ್‌ನ ನೀಡಿಕೆಯು ಜನವರಿ 10 ರಿಂದ ಪ್ರಾರಂಭವಾಗುತ್ತದೆ.
ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಸಹ-ಅಸ್ವಸ್ಥತೆ (Co-Morbidities) ಹೊಂದಿರುವವರು ಅಥವಾ Booster Dose ಪಡೆಯಲು ಅರ್ಹರಾಗಿರುತ್ತಾರೆ.
ಇದರ ಜೊತೆಗೆ ‘Precautionary’ ಅಥವಾ ಮೂರನೇ ಡೋಸ್ ಪಡೆಯಲು ಅರ್ಹರಾಗಿರುವವರಿಗೆ ಲಸಿಕೆಗಳ ಮಿಶ್ರಣ ಅಥವಾ ಹೊಂದಾಣಿಕೆ (Vaccine Mix-and-Match) ಮಾಡುವುದಿಲ್ಲ ಎಂದು ಭಾರತದ ಕೋವಿಡ್ ಕಾರ್ಯಪಡೆಯ ಮುಖ್ಯಸ್ಥ ಡಾ ವಿಕೆ ಪಾಲ್ (Dr. VK Paul) ಹೇಳಿದ್ದಾರೆ.
ಇದರರ್ಥ ಸೀರಮ್ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್‌ನ (Covishield) ಎರಡು ಡೋಸ್‌ಗಳನ್ನು ಪಡೆದ ವ್ಯಕ್ತಿ ಈ ಬಾರಿ ಅದೇ ಲಸಿಕೆಯನ್ನು ಪಡೆಯುತ್ತಾರೆ ಮತ್ತು ಭಾರತ್ ಬಯೋಟೆಕ್‌ನ ಕೋವಾಕ್ಸಿನ್ (Covaxin) ಪಡೆದವರು ಅದೇ ಲಸಿಕೆಯನ್ನು ಮೂರನೇ ಬಾರಿಯೂ ಪಡೆಯಬೇಕಾಗುತ್ತದೆ.