back to top
23.3 C
Bengaluru
Thursday, December 5, 2024
HomeSportsCricketJohannesburg ನಲ್ಲಿ ಭಾರತ ತಂಡಕ್ಕೆ ಮೊದಲ ಸೋಲು

Johannesburg ನಲ್ಲಿ ಭಾರತ ತಂಡಕ್ಕೆ ಮೊದಲ ಸೋಲು

- Advertisement -
- Advertisement -

Johannesburg, South Africa : Centurion ಕ್ರೀಡಾಂಗಣದಲ್ಲಿ ಗೆದ್ದ ಏಷ್ಯಾದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಭಾರತ ಸೋಲೇ ಕಾಣದ ಜೋಹಾನ್ಸ್‌ಬರ್ಗ್ ನ ವಾಂಡರರ್ಸ್‌ನಲ್ಲಿ ಮುಗ್ಗರಿಸಿದೆ. ಭಾರತ ಟೆಸ್ಟ್ (India Test Cricket Team) ತಂಡದ ನಾಯಕ ವಿರಾಟ್ ಕೊಹ್ಲಿಯ (Virat Kohli) ಅನುಪಸ್ಥಿತಿಯಲ್ಲಿ ಕೆ.ಎಲ್.ರಾಹುಲ್ (K.L. Rahul) ನಾಯಕತ್ವದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿ ಮೊದಲ ಇನ್ನಿಂಗ್ಸ್ ನಲ್ಲಿ ನಾಯಕ ಕೆ.ಎಲ್.ರಾಹುಲ್ ರ ಅರ್ಧ ಶತಕದ ನೆರವಿನಿನಿಂದ 202 ರನ್ ಗಳಿಸಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾದ Marco Jansen ಭಾರತದ 4 ವಿಕೆಟ್ ಪಡೆದು ಮಿಂಚಿದರು.

ದಕ್ಷಿಣ ಆಫ್ರಿಕಾ ಮೊದಲನೇ ಇನಿಂಗ್ಸ್ ನಲ್ಲಿ Keegan Petersen ಹಾಗು Bavuma ರ ಅರ್ಧ ಶತಕದ ನೆರವಿನಿಂದ ೨೨೯ ರನ್ ಗಳಿಸಿ 27 ರನ್ ಗಳ ಮುನ್ನಡೆ ಪಡಿಯಿತು. ಭಾರತದ Shardul Thakur ಮೊದಲ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಪಡೆದರು.

27 ರನ್ ಗಳ ಹಿನ್ನೆಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಪೂಜಾರ,ರಹಾನೆ ಮತ್ತು ಹನುಮ ವಿಹಾರಿಯ ಸಂಯೋಜಿತ ಆಟದ ನೆರವಿನಿಂದ 266 ರನ್ ಗಳಿಸಿ ದಕ್ಷಿಣ ಆಫ್ರಿಕಾಗೆ 240 ರನ್ ಗಳ ಗುರಿಯನ್ನು ನೀಡಿತು. ಎರಡನೇ ಇನ್ನಿಂಗ್ಸ್ ನಲ್ಲಿ ಸೌತ್ ಆಫ್ರಿಕಾದ Kagiso Rabada, Lungi Ngidi, Marco Jansen ತಲಾ ಮೂರು ವಿಕೆಟ್ ಪಡೆದರು. 240 ರನ್ ಗಳ ಸಾಧಾರಣ ಗುರಿ ಬೆನ್ನೆತ್ತಿದ ಸೌತ್ ಆಫ್ರಿಕಾ ನಾಯಕ Dean Elgar ರ ಅಜೇಯ 96 ರನ್ ಗಳ ನೆರವಿನಿಂದ 2ನೇ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ ಗಳ ಭರ್ಜರಿ ಜಯದೊಂದಿಗೆ 3 ಟೆಸ್ಟ್ ಸರಣಿಯಲ್ಲಿ 1–1 ರ ಸಮಬಲ ಸಾಧಿಸಿದೆ.

ಇದೇ 11ರಿಂದ ಕೇಪ್‌ಟೌನ್‌ನಲ್ಲಿ (Cape Town) ಆರಂಭವಾಗಲಿರುವ 3ನೇ ಪಂದ್ಯದಲ್ಲಿ ಭಾರತಕ್ಕೆ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿ ಸರಣಿ ಗೆಲ್ಲುವ ಅವಕಾಶವಿದೆ.


Image: ESPN CricInfo

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page