Mumbai, Maharastra : ಹೆಸರಾಂತ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರಿಗೆ ಕೊರೊನಾ ಸೋಂಕು (Covid-19 Positive) ಪತ್ತೆಯಾಗಿದ್ದು, ಅವರನ್ನು ಮಂಗಳವಾರ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತದ ಕೋಗಿಲೆ ಎಂದೇ ಕರೆಯಲ್ಪಡುವ 92 ವರ್ಷದ ಗಾಯಕಿಯು ಪ್ರಸ್ತುತ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗೇಶ್ಕರ್ ಅವರ ಆರೋಗ್ಯದ ಕುರಿತು ಮಾಹಿತಿ ಹಂಚಿಕೊಂಡಿರುವ ಕುಟುಂಬದವರು, “ಅವರು ಚೆನ್ನಾಗಿಯೇ ಇದ್ದಾರೆ; ಆಕೆಯ ವಯಸ್ಸನ್ನು ಪರಿಗಣಿಸಿ ಮುಂಜಾಗ್ರತಾ ಕಾರಣಕ್ಕಾಗಿ ಮಾತ್ರ ICUನಲ್ಲಿ ಇರಿಸಲಾಗಿದೆ” ಎಂದು ತಿಳಿಸಿರುವುದಾಗಿ ANI ವರದಿ ಮಾಡಿದೆ.