Mysuru : ಡಾ ಭಾರತಿ ಆಶ್ರಯದಲ್ಲಿ ಮೈಸೂರು ಜಿಲ್ಲಾ ಕ್ರೀಡಾ ಸಮ್ಮೇಳನಕ್ಕೆ (Mysore District Sports Tournament) ಪೂರ್ವಭಾವಿಯಾಗಿ ನಡೆಯುತ್ತಿರುವ ಕ್ರೀಡಾ ಸಪ್ತಾಹದಲ್ಲಿ ಸೋಮವಾರ ಕುಸ್ತಿ ಪೈಲ್ವಾನರು ಅಕಾಡಕ್ಕೆ ಇಳಿದ್ದಿದ್ದರು. ಸಾಹುಕಾರ್ ಎಸ್.ಚನ್ನಯ್ಯ ಕುಸ್ತಿ ಅಖಾಡದಲ್ಲಿ (Wrestling) ಜಯಚಾಮರಾಜ ಒಡೆಯರ್ ಗರಡಿ ಸಂಘದ ಆಶ್ರಯದಲ್ಲಿ ನಡೆದ ಪೈಪೋಟಿಯಲ್ಲಿ ಸುಣ್ಣದಕೇರಿಯ ಪೈಲ್ವಾನ್ ಆರ್.ಕೆ.ನಿತಿನ್ ತೊಡೆ ತೊಡೆತಟ್ಟಿದರು.
ಬೆಸ್ತರಕಾಳಣ್ಣನ ಗರಡಿಯ ಬೈರಪ್ಪ ನಾಯ್ಕ, ಕಡಕೊಳದ ಹರ್ಷವರ್ಧನ್, ಕ್ಯಾತಮಾರನಹಳ್ಳಿಯ ಮಾದಪ್ಪ, ಶ್ರೇಯಸ್, ಅಜಯ್, ಕೆ.ಜಿ.ಕೊಪ್ಪಲಿನ ಪೈ.ಪ್ರೀತಂ, ಮುಖೇಶ್, ಪಿ.ಹೊಸಹಳ್ಳಿಯ ಪೈ.ಸೂರಜ್, ಬಸ್ತಿಪುರದ ರಾಕೇಶ್, ಭೂತಪ್ಪನ ಗರಡಿಯ ಸಾಗರ್, ಮೇಳಾಪುರದ ವಿನಯ್, ಮನು, ವಿಕಾಸ್ ಹಾಗೂ ಪಡುವಾರಹಳ್ಳಿಯ ಗಗನ್ ಮೊದಲ ಸ್ಥಾನ ಪಡೆದರು.ಭೂತಪ್ಪನವರ ಗರಡಿಯ ಶಾಯಿದ್, ರೋಹಿತ್, ಕ್ಯಾತಮಾರನಹಳ್ಳಿಯ ಗೋವಿಂದರಾಜ್, ರವಿಚಂದ್ರ, ಪಡುವಾರಹಳ್ಳಿಯ ಮಂಜು, ರಾಹುಲ್, ಮೈಸೂರಿನ ದರ್ಶನ್, ವಿಶಾಲ್, ಮಳವಳ್ಳಿ ಹರೀಶ್, ರಮೇಶ್, ಉದ್ಬೂರು ಯೋಗೇಶ್, ನಾಗನಹಳ್ಳಿ ಸುಮಂತಗೌಡ, ಮೇಳಾಪುರದ ವಿನಯ್, ನರಸೀಪುರದ ಧನಂಜಯ ಭಾಗಿಯಾಗಿದ್ದರು.