ಪ್ರೊ ಕಬಡ್ಡಿ 2021 – ಆವೃತ್ತಿ 8 ರ ( Pro Kabaddi League) ಏಳನೇ ದಿನದ ಎರಡು ಪಂದ್ಯಗಳು ಮಂಗಳವಾರ ನಡೆದವು. ಮೊದಲ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ (Patna Pirates) ಪುಣೇರಿ ಪಲ್ಟನ್ (Puneri Paltan) ವಿರುದ್ಧ ಕಣಕ್ಕೆ ಇಳಿದರೆ, ಎರಡನೆಯ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ (Haryana Steelers) ತೆಲುಗು ಟೈಟನ್ಸ್ (Telugu Titans) ಅನ್ನು ಎದುರಿಸಿತು.
ಪಂದ್ಯ 1: Puneri Paltan Vs Patna Pirates

ದಿನದ ಮೊದಲ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ (Patna Pirates) ಪುಣೇರಿ ಪಲ್ಟನ್ (Puneri Paltan) ವಿರುದ್ಧ ಅದ್ಭುತ ಪ್ರದರ್ಶನದೊಂದಿಗೆ ಗೆಲುವಿನ ಹಾದಿಗೆ ಮರಳಿತು. ಪಾಟ್ನಾ ಮೂಲದ ಫ್ರಾಂಚೈಸಿ ವಿಶಾಲ್ ಭಾರದ್ವಾಜ್ (Vishal Bhardwaj) ನಾಯಕತ್ವದ ತಂಡವನ್ನು 38-26 ಅಂಕಗಳಿಂದ ಸೋಲಿಸಿತು.
ಪುಣೇರಿ ಪಲ್ಟನ್ ಪರ ಯಾವುದೇ ರೈಡರ್‌ಗಳು 5 ಕ್ಕಿಂತ ಹೆಚ್ಚು ರೇಡ್ ಪಾಯಿಂಟ್‌ಗಳನ್ನು ಗಳಿಸಲು ಸಾಧ್ಯವಾಗದೆ 40 ನಿಮಿಷಗಳಲ್ಲಿ ಕೇವಲ 26 ಅಂಕಗಳನ್ನು ಗಳಿಸಿತು. ತಂಡದ ಪರ ಬದಲಿ ರೈಡರ್ ಮೋಹಿತ್ ಗೋಯತ್ (Mohit Goyat) 2 ಟಚ್ ಪಾಯಿಂಟ್, 2 ಬೋನಸ್ ಮತ್ತು 3 ಟ್ಯಾಕಲ್ ಪಾಯಿಂಟ್ ಗಳಿಸಿದರು.
ಪಾಟ್ನಾ ಪೈರೇಟ್ಸ್ ಪರ ಸಚಿನ್ ತನ್ವಾರ್ (Sachin Tanwar) ಸೂಪರ್ 10 ಗಳಿಸಿದರು ಹಾಗೂ ನಾಯಕ ಪ್ರಶಾಂತ್ ಕುಮಾರ್ ರೈ (Prashanth Kumar Rai) 5 ಟಚ್ ಪಾಯಿಂಟ್‌ಗಳನ್ನು ಪಡೆಯುವುದರೊಂದಿಗೆ ಪಾಟ್ನಾ ಪೈರೇಟ್ಸ್ 38-26 ಅಂಕಗಳೊಂದಿಗೆ ಪುಣೇರಿ ಪಲ್ಟನ್ ಅನ್ನು 12 ಅಂಕಗಳ ಮುನ್ನಡೆ ಪಡೆದು ಸೋಲಿಸಿತು.
ಪಂದ್ಯ 2: Telugu Titans Vs Haryana Steelers

ದಿನದ ಎರಡನೆಯ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ (Haryana Steelers) ಪ್ರೊ ಕಬಡ್ಡಿ 2021 ರಲ್ಲಿ ತೆಲುಗು ಟೈಟನ್ಸ್ (Telugu Titans) ಅನ್ನು 39-37 ಅಂಕಗಳೊಂದಿಗೆ ಸೋಲಿಸುವ ಮೂಲಕ ತನ್ನ ಮೊದಲ ಜಯವನ್ನು ದಾಖಲಿಸಿತು.
ಸ್ಟೀಲರ್ಸ್ ಪರ ಹೊಸ ಆಟಗಾರ ಮೀತೂ (Meetu) ಚೊಚ್ಚಲ ಸೂಪರ್ 10 ಅನ್ನು ಗಳಿಸಿದರು.
ಟೈಟನ್ಸ್ ಪರ ಸಿದ್ಧಾರ್ಥ್ ದೇಸಾಯಿ (Siddharth Desai) ಮತ್ತು ಅಂಕಿತ್ ಬೇನಿವಾಲ್ (Ankit Beniwal) ತಲಾ ಒಂಬತ್ತು ಪಾಯಿಂಟ್ಸ್ ಗಳಿಸಿದರೆ, ರಾಕೇಶ್ ಗೌಡ (Rakesh Gowda) ಏಳು ಪಾಯಿಂಟ್ಸ್ ಗಳಿಸಿದರು.
PKL 2021 Day – 7 Score Card
PKL 2021 ರ ಏಳನೇ ದಿನದ ಪಂದ್ಯಗಳ ನಂತರ ತಂಡಗಳ ಬಲಾಬಲಗಳು ಈ ರೀತಿ ಇವೆ
