Pro Kabaddi 2021 – ಆವೃತ್ತಿ 8, ಜನವರಿ 17, 2022 ಸೋಮವಾರ ಸಂಜೆ ಡಬಲ್-ಹೆಡರ್‌ನೊಂದಿಗೆ ಬೆಂಗಳೂರಿನಲ್ಲಿ ಮುಂದುವರೆಯಿತು. ಮೊದಲ ಪಂದ್ಯದಲ್ಲಿ ಯುಪಿ ಯೋಧಾ (U.P. Yoddha), ಪುಣೇರಿ ಪಲ್ಟನ್ (Puneri Paltan) ತಂಡವನ್ನು ಎದುರಿಸಿತು. ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ (Bengal Warriors) ಮತ್ತು ತೆಲುಗು ಟೈಟಾನ್ಸ್ (Telugu Titans) ನಡುವೆ ಘರ್ಷಣೆ ನಡೆಯಿತು.
ಪಂದ್ಯ 1: Puneri Paltan Vs U.P. Yoddha

ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಯುಪಿ ಯೋಧಾ (U.P. Yoddha), ಪುಣೇರಿ ಪಲ್ಟನ್ (Puneri Paltan) ವಿರುದ್ಧ ಮೇಲುಗೈ ಸಾಧಿಸಿತು (50-40). 40 ನಿಮಿಷಗಳ ಪಂದ್ಯದಲ್ಲಿ ಒಟ್ಟು 90 ಅಂಕಗಳನ್ನು ಗಳಿಸಲಾಯಿತು, ಯುಪಿ 50 ಅಂಕಗಳನ್ನು ಗಳಿಸಿದರೆ ಪುಣೇರಿ ಪಲ್ಟನ್ 40 ಅಂಕಗಳನ್ನು ಗಳಿಸಿತು.
ಗಿಲ್ ಯುಪಿ ಯೋಧಕ್ಕಾಗಿ 21 ರೇಡ್ ಪಾಯಿಂಟ್‌ಗಳನ್ನು ಸಂಗ್ರಹಿಸಿದರು. ಪರ್ದೀಪ್ ನರ್ವಾಲ್ ಮತ್ತು ಸುರೇಂದರ್ ಗಿಲ್ ಅವರ ಸೂಪರ್ 10 ಪಡೆದರು. ನಿತೇಶ್ ಕುಮಾರ್ ನಾಲ್ಕು ಟ್ಯಾಕಲ್ ಪಾಯಿಂಟ್ ಗಳಿಸಿದರು. ಪುಣೇರಿ ಪಲ್ಟನ್ ಪರ ಅಸ್ಲಾಮ್ ಇನಾಮದಾರ್ ಮತ್ತು ಮೋಹಿತ್ ಗೋಯತ್ ಸೂಪರ್ 10 ಗಳಿಸಿದರು.
ಪಂದ್ಯ 2: Telugu Titans Vs Bengal Warriors

ರಾತ್ರಿಯ ಎರಡನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ (Telugu Titans) ಪಂದ್ಯದ ಕೊನೆಯ ಕ್ಷಣದಲ್ಲಿ ಆಲೌಟ್ ಆಗಿ ಬೆಂಗಾಲ್ ವಾರಿಯರ್ಸ್ (Bengal Warriors) ವಿರುದ್ಧ 27-28 ಅಂತರದಲ್ಲಿ ಸೋಲನ್ನು ಕಂಡಿತು.
ತೆಲುಗು ಟೈಟಾನ್ಸ್ ಪರ ರಜನೀಶ್ ಸೂಪರ್ 10, ಸಂದೀಪ್ ಕಂಡೋಲ ನಾಲ್ಕು ಅಂಕ ಗಳಿಸಿದರು.
ಬೆಂಗಾಲ್ ವಾರಿಯರ್ಸ್ ಪರ ಮಣಿಂದರ್ ಸಿಂಗ್ ಸೂಪರ್ 10 , ಸುಖೇಶ್ ಹೆಗ್ಡೆ ಐದು ಪಾಯಿಂಟ್‌ಗಳನ್ನು ಗಳಿಸಿದರು. ರಣ್ ಸಿಂಗ್ ರಕ್ಷಣಾ ವಿಭಾಗದಲ್ಲಿ ನಾಲ್ಕು ಅಂಕಗಳನ್ನು ಪಡೆದರು.
PKL 2021 – January 17, 2022 Score Card
PKL 2021 ರ January 17, 2022 ದಿನದ ಪಂದ್ಯಗಳ ನಂತರ ತಂಡಗಳ ಬಲಾಬಲಗಳು ಈ ರೀತಿ ಇವೆ
