Turuvekere, Tumkur (Tumakuru) : ತುರುವೇಕೆರೆ ತಾಲ್ಲೂಕಿನ ಸೊರವನಹಳ್ಳಿ, ವಡ ವನಘಟ್ಟ, ಸಂಪಿಗೆ, ಸಂಪಿಗೆಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ವಸತಿ ರಹಿತ ಅಲೆಮಾರಿ ಹಾಗೂ ಅರೆ ಅಲೆಮಾರಿ ಕುಟುಂಬಗಳಿಗೆ ಸರ್ಕಾರದಿಂದ ಮನೆ ಮಂಜೂರಾದ ಫಲಾನುಭವಿಗಳಿಗೆ ಆದೇಶ ಪತ್ರವನ್ನು ಶಾಸಕ ಮಸಾಲ ಜಯರಾಂ ವಿತರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು “ಗುಡಿಸಲು ಮುಕ್ತ ತಾಲ್ಲೂಕು ಮಾಡುವ ಗುರಿ ಹೊಂದಿದ್ದು ತಾಲ್ಲೂಕಿನಲ್ಲಿರುವ ಸುಮಾರು 72 ಗೊಲ್ಲರಹಟ್ಟಿಗಳಲ್ಲಿ ಗುಡಿಸಲಿನಲ್ಲಿ ವಾಸ ಮಾಡುವಂತಹ ಕುಟುಂಬಗಳಿಗೆ ಸರ್ಕಾರ 1,258 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದು, ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಗಿದೆ” ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಇ.ಒ ಸತೀಶ್ ಕುಮಾರ್, ಸೊರವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾವಿರ್ ಹುಸೇನ್, ಉಪಾಧ್ಯಕ್ಷೆ ಶಶಿಕಲಾ, ಎಪಿಎಂಸಿ ಸದಸ್ಯ ಕಾಂತರಾಜು, ಸಂಪಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜ, ಸದಸ್ಯರಾದ ಶಿವಲಿಂಗಮೂರ್ತಿ, ಮುಖಂಡರಾದ ಸೋಮಶೇಖರ್, ಇಂದ್ರಕುಮಾರ್, ಷಣ್ಮುಖಸ್ವಾಮಿ, ಯಾದವ ಮುಖಂಡರಾದ ಪ್ರಕಾಶ್, ಚಂದ್ರಣ್ಣ, ನರಸೇಗೌಡ ಉಪಸ್ಥಿತರಿದ್ದರು.